ಮಹಿಳೆ ಬ್ಯಾಗಲ್ಲಿ ಸ್ಯಾಟಲೈಟ್ ಫೋನ್ !

Kannada News

06-10-2017

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಅಮೆರಿಕಕ್ಕೆ ಹೊರಟ್ಟಿದ್ದ ಮಹಿಳೆಯೊಬ್ಬರ ಬ್ಯಾಗ್‍ ನಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಪತ್ತೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ಮುಂಬೈ ಮೂಲಕ ಅಮೆರಿಕಕ್ಕೆ ಹೊರಟಿದ್ದ ಮಹಿಳೆ ಹ್ಯಾಂಡ್‍ ಬ್ಯಾಗನ್ನು ತಪಾಸಣೆ ಮಾಡಿದಾಗ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಜೆಟ್ ಏರ್‍ವೇಸ್ ಮೂಲಕ ಅಮೆರಿಕಕ್ಕೆ ಹಾರಲು ಮಹಿಳೆ ಸಿದ್ಧವಾಗಿದ್ದರು. ಜೆಟ್‍ ಏರ್‍ವೇಸ್ ವಿಮಾನ ಸಂಖ್ಯೆ 9 488 ನಲ್ಲಿ ಹೊರಡಲು ಸಿದ್ಧವಾಗಿದ್ದ ಅಮೆರಿಕದ ಪ್ರಜೆ ಪರ್ಲ್ ಎಂಜಾಲ್ ಮೆಕ್ಕಾನ್ಸ್ ಬ್ಯಾಗ್‍ ನಲ್ಲಿ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಸಂಜೆ 6 ಗಂಟೆ 10 ನಿಮಿಷದಲ್ಲಿ ಡಿಪಾರ್ಚರ್‍ ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಪತ್ತೆಯಾದ ಫೋನ್ ಬಗ್ಗೆ ಮಹಿಳೆ ಯಾವುದೇ ದಾಖಲಾತಿ ನೀಡಿಲ್ಲ. ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದ್ದು, ಪೋನ್ ಪತ್ತೆಯಾದ ಪರ್ಲ್ ವಿರುದ್ಧ ಸಿಐಎಸ್‍ಎಫ್ ಅಧಿಕಾರಿ ಎಂ.ಎಸ್ ಯಾದವ್ ಅವರು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂಡಿಯನ್ ವೈರ್‍ಲೆಸ್ ಆ್ಯಕ್ಟ್  ಇಂಡಿಯನ್ ಟೆಲಿಗ್ರಫಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ