ಬಿಜೆಪಿಗೆ ಪ್ರತಿಷ್ಠೆ, ರೈ ಗೆ ಪ್ರಶಸ್ತಿ !

Kannada News

06-10-2017

ನಟ ಪ್ರಕಾಶ್ ರೈ ವಿರುದ್ದ ಬಿಜೆಪಿಯವರು ಗುದ್ದಾಟಕ್ಕಿಳಿದಿರುವುದಕ್ಕೆ ಮತ್ತೊಂದು ಮಜಲು ಸಿಕ್ಕಿದೆ. ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ರೈ, ಪ್ರಧಾನಿ ಮೌನದ ಬಗ್ಗೆ ಪ್ರಶ್ನಿಸಿದ್ದೇ ದೊಡ್ಡ ತಪ್ಪು ಎಂಬಂತೆ ಟೀಕೆಗೊಳಗಾಗಿದ್ದಾರೆ. ಹೀಗಿರುವಾಗಲೇ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಯನ್ನ ಈ ಸಾಲಿನಲ್ಲಿ ಪ್ರಕಾಶ್ ರೈಗೆ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಮಂಗಳೂರಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಕಾರಂತ ಪ್ರತಿಷ್ಟಾನ ಈ ಪ್ರತಿಷ್ಟಿತ ಪ್ರಶಸ್ತಿ ಕೊಡುತ್ತಿದ್ದು, ಬಿಜೆಪಿಯ ಅನೇಕ ಮುಖಂಡರು ಈ ಪ್ರಶಸ್ತಿಯನ್ನ ರೈಗೆ ಕೊಡಬಾರದು ಎಂದು ಎಲ್ಲಾ ರೀತಿಯ ಒತ್ತಡವನ್ನ ಗ್ರಾಮ ಪಂಚಾಯತಿ ಮೇಲೂ ಹೇರುತ್ತಿದ್ದಾರೆ.

ಹೇಳಿಕೇಳಿ ಕರಾವಳಿ ನಾಡಲ್ಲಿ ಜಿಜೆಪಿ ಹವಾ ಹೆಚ್ಚು, ಆದರೀಗ ಭಾಜಪದವರ ಯಾರ ಒತ್ತಡಕ್ಕೂ ಮಣಿಯದೆ, ಪ್ರಶಸ್ತಿಯನ್ನು ಪ್ರಕಾಶ್ ರೈಗೆ ಕೊಟ್ಟೇ ಕೊಡುತ್ತೇವೆ ಎಂದು ಹುಟ್ಟೂರಿನವರು ಪಟ್ಟು ಹಿಡಿದಿದ್ದಾರೆ. ತಮ್ಮ ನೆಲೆ ಭದ್ರವಾಗಿರುವ ಪ್ರದೇಶದಿಂದಲೇ ರೈಗೆ ಪ್ರಶಸ್ತಿ ಕೊಡಮಾಡುತ್ತಿರುವುದು ಬಿಜೆಪಿಯವರಿಗಾಗುತ್ತಿಲ್ಲ ವಾದ್ದರಿಂದ, ತಡೆಯುವ ಎಲ್ಲ ಯತ್ನ ಮುಂದುವರಿಸಿದ್ದಾರೆ. ಹಿಗಾಗಿ ಹೊಸಾ ವಿವಾದ ಎದ್ದು ಕೂತಿದ್ದು, ಜಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜು

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ