ಕುರುಬ ರಾಜಕಾರಣಕ್ಕೆ ಮತ್ತೊಂದು ಟ್ವಿಸ್ಟ್..

Kannada News

06-10-2017

ಸಿದ್ದು-ವಿಶ್ವನಾಥ್ ನಡುವಣ ಕದನಕ್ಕೆ ಸಿ.ಎಚ್.ವಿಜಯಶಂಕರ್ ಪ್ರವೇಶಿಸುವಂತೆ ಮಾಡುವ ಯತ್ನದ ಮೂಲಕ ಕುರುಬ ರಾಜಕಾರಣಕ್ಕೆ ಟ್ವಿಸ್ಟ್ ಸಿಗುತ್ತಿದೆ.

ವಿಶ್ವನಾಥ್‍ ಗೆ ಓಟು ಹಾಕಬೇಡಿ ಎಂದು ತನ್ನ ಸಮುದಾಯದವರಿಗೆ ಸಿದ್ದು ಹೇಳಿರುವ ಬೆನ್ನಲ್ಲೇ, ವಿಶ್ವನಾಥ್ ಮುಖ್ಯಮಂತ್ರಿಗೆ ಜಾಡಿಸುತ್ತಿದ್ದಾರೆ. ಹೀಗಾಗಿ ಏನಾದರಾಗಲಿ ವಿಶ್ವನಾಥ್‍ ಅವರನ್ನು ರಾಜಕೀಯವಾಗಿ ಮುಗಿಸಲೇಬೇಕೆಂಬ ನಿಲುವಿನಲ್ಲಿರುವ ಸಿದ್ದು ಈಗ ಗಾಳ ಹಾಕಿರುವುದು ಕುರುಬ ಸಮುದಾಯದ ಬಿಜೆಪಿ ನಾಯಕ ವಿಜಯಶಂಕರ್ ಅವರಿಗೆ.

ಮೂಲತ: ಕಾಂಗ್ರೆಸ್ಸಿನವರಾಗಿದ್ದ ವಿಜಯಶಂಕರ್ ನಂತರ ಭಾಜಪ ಸೇರಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರೂ ಆಗಿದ್ದರು. ಕುರುಬ ಜನಾಂಗದಲ್ಲಿ ನಾಯಕ ಎನಿಸಿಕೊಂಡಿರುವ ಇವರಿಗೆ ಮೇಲ್ಮನೆ ಸದಸ್ಯತ್ವ ಕೊಡಲಾಗಿತ್ತಾದರೂ, ಕಳೆದ ಸಲ ಸಂಸತ್ ಸ್ಥಾನಕ್ಕೆ ಮೈಸೂರಿನಿಂದ ಟಿಕೆಟ್ ಕೊಡದೆ, ಹಾಸನದಿಂದ ಎಚ್.ಡಿ.ದೇವೇಗೌಡರ ವಿರುದ್ದ ನಿಲ್ಲಿಸಲಾಗಿತ್ತು. ಮನಸಿಲ್ಲದ ಮನಸಿಂದ ಸ್ಪರ್ಧಿಸಿ ಸೋತ, ವಿಜಯಶಂಕರ್ ಈಗ ಜಿಜೆಪಿಯಲ್ಲಿ ಮೊದಲಿನಷ್ಟು ಆದ್ಯತೆಯನ್ನು ಹೊಂದಿಲ್ಲದಿದ್ದು, ಪಕ್ಷದ ರೈತ ವಿಭಾಗದ ಅಧ್ಯಕ್ಷರಾಗಿದ್ದಾರೆ.

ಪಕ್ಷದಲ್ಲಿ ಮೂಲೆಗುಂಪಾಗಿರುವ ಇವರನ್ನು ಕಾಂಗ್ರೆಸ್‍ ಗೆ ಸೇರಿಸಿಕೊಂಡು, ದಳದ ವಿಶ್ವನಾಥ್ ವಿರುದ್ದ ನಿಲ್ಲಿಸಿದರೆ ಸರಿಯಾಗುತ್ತೆ ಎಂಬ ಲೆಕ್ಕದಿಂದ ಸಿದ್ದು ಈಗ ವಿಜಯಶಂಕರ್ ಸೆಳೆಯಲು ಮುಂದಾಗಿದ್ದಾರೆ. ಒಂದು ವೇಳೆ ಪಕ್ಷ ಬಿಟ್ಟು ಬಂದರೆ, ಹುಣಸೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ಕೊಡುವ ಇರಾದೆಯೂ ಇದೆ. ಹಾಲಿ ಶಾಸಕ ಮಂಜುನಾಥ್ ಕೂಡ ಸಿದ್ದು ಆಪ್ತ. ಆದರೆ ವಿಶ್ವನಾಥ್ ಮಣಿಸಲು ವಿಜಯಶಂಕರ್ ಅಭ್ಯರ್ಥಿಯಾಗುವುದಾದರೆ, ಸ್ಥಾನ ತ್ಯಾಗಕ್ಕೂ ಇವರು ಸಿದ್ದರಾಗುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಉಪಚುನಾವಣೆಯಲ್ಲೂ ಪಕ್ಷಬಿಟ್ಟು ತನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶ್ರೀನಿವಾಸ್ ಪ್ರಸಾದ್‍ ಗೆ ತಿರುಗೇಟು ನೀಡಲು, ಸಿದ್ದು ನಂಜನಗೂಡಿನಲ್ಲಿ ದಳದ ನಾಯಕನಾಗಿ ಗುರುತಿಸಿಕೊಂಡಿದ್ದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್‍ ಗೆ ಸೇರಿಸಿಕೊಂಡು, ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡಿದ್ದರು. ಈಗ ವಿಶ್ವನಾಥ್ ವಿರುದ್ಧ ವಿಜಯಶಂಕರ್‍ ಬಿಜೆಪಿಯಿಂದ ಎಳೆದುಕೊಳ್ಳಲು ಮುಂದಾಗಿರುವುದು ಹೊಸಾ ಲೆಕ್ಕಾಚಾರಗಳಿಗೆ ದಾರಿಯಾಗಿದೆ. ಈ ಬೆಳವಣಿಗೆ ಬಿಜೆಪಿಯಲ್ಲೂ ತಳಮಳ ಹುಟ್ಟಿಸಿದೆ. ಅಂತೂ ಇವೆಲ್ಲವೂ ಕುರುಬರ ಗುದ್ದಾಟಕ್ಕೆ ವೇದಿಕೆಯನ್ನೊದಗಿಸುತ್ತಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Holl
  • Harisha
  • Cabl
Holl
  • Harisha
  • Cabl