ರಸ್ತೆ ಗುಂಡಿಗಳನ್ನು ಮುಚ್ಚಿದ್ದಾದರು ಎಲ್ಲಿ..?

Kannada News

06-10-2017

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ರಾತ್ರಿಯಲ್ಲಿ ಒಂದು ಸಾವಿರ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆಯೆಂದು ಬಿಬಿಎಂಪಿ ಘೋಷಿಸಿದೆ. ಇದನ್ನು ಓದಿದ, ಬಿಬಿಎಂಪಿ ಯನ್ನು ಬಲ್ಲ  ಯಾರಿಗಾದರೂ ಅತ್ಯಾಶ್ಚರ್ಯವಾಗದೆ ಇರದು ಎಂದು ಬಿಜೆಪಿ ಮುಖಂಡ ಎಸ್.ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ನಿಜಕ್ಕೂ  ಗುಂಡಿ ಮುಚ್ಚಲಾಗಿದೆಯೆ ಎಂಬ ಬಗ್ಗೆ ಸಾರ್ವಜನಿಕರಿಂದಲೇ ಸಾಮಾಜಿಕ ಲೆಕ್ಕಪತ್ರ ನಡೆಯಬೇಕು. ಇದಕ್ಕೆ ಬಿಬಿಎಂಪಿ ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಮುಚ್ಚಿರುವ "ಸಾವಿರ " ಗುಂಡಿಗಳ ವಿವರಗಳನ್ನು ಕೂಡಲೇ ಪ್ರಕಟಿಸಬೇಕು. ಯಾವ ವಾರ್ಡ್, ಯಾವ ಪ್ರದೇಶ, ಯಾವ ರಸ್ತೆ ಎಂಬ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ