ಒಂದು ಕಣ್ಣಿಗೆ ಎರಡು ಜೀವ ಬಲಿ !

Kannada News

06-10-2017

ಬೆಂಗಳೂರು: ಚೆನ್ನಪಟ್ಟಣ ತಾಲ್ಲೂಕಿನ ಕುಕ್ಕೂರುದೊಡ್ಡಿಯ ರಂಜಿತಾ ಎನ್ನುವ ಯುವತಿ ಕೊಟ್ಟ ಮಾತು ನಡೆಯಲಿಲ್ಲವೆಂಬ ಕಾರಣಕ್ಕೆ ತನ್ನ ಪ್ರಾಣವನ್ನು ತ್ಯಾಗ ಮಾಡಿ ಕೇವಲ ಬಾಯಿ ಮಾತಿಗೆ ಎಷ್ಟು ಬೆಲೆ ಇದೆ ಎಂಬುದನ್ನು ತೋರಿಸಿ ಮಾದರಿಯಾಗಿದ್ದಾಳೆ.

ರಂಜಿತಾಳ ಸೋದರಮಾವ ಎಲೆಕ್ಟ್ರಿಕ್ ಅಂಗಡಿ ಮಳಿಗೆಯೊಂದನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದು ಈತನ ಅಂಗಡಿಯಲ್ಲಿ ಓರ್ವ ಯುವಕ ಕೆಲಸ ಮಾಡುತ್ತಿರುತ್ತಾನೆ. ಆತನು ಕೂಡ ಸ್ಪುರದ್ರೂಪಿ ಮತ್ತು ಒಳ್ಳೆಯ ಗುಣಕ್ಕೆ ಹೆಸರುವಾಸಿಯಾಗಿ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿರುತ್ತಾನೆ.

ಆತನ ಒಳ್ಳೆಯ ನಡೆತೆಯನ್ನು ಮೆಚ್ಚಿದ ರಂಜಿತಾಳ ಸೋದರಮಾವ ಆತನನ್ನು ತನ್ನ ಸೋದರಿಯ ಮಗಳು ರಂಜಿತಾಳಿಗೆ ವಿವಾಹ ಮಾಡಿಕೊಡುವ ವಿಷಯ ಪ್ರಸ್ತಾಪ ಮಾಡಿರುತ್ತಾರೆ. ಆತನ ಪೋಷಕರೂ ಕೂಡ ರಂಜಿತಾಳನ್ನು ಒಪ್ಪಿ ಮದುವೆ ಮಾಡುವ ಆಲೋಚನೆಯನ್ನು ಸ್ವೀಕರಿಸುತ್ತಾರೆ.

ಬಾಯಿಮಾತಿನ ವಿಚಾರ ವಿನಿಮಯವೇ ಹೊರತು ಒಪ್ಪಂದ ಆಗಿರಲಿಲ್ಲ.  ಹೀಗೆ ದಿನ ಕಳೆದಂತೆ ಆ ಯುವಕ ಕಬ್ಬಿಣವನ್ನು ತುಂಡರಿಸಿದಂತಹ ಸಂದರ್ಭದಲ್ಲಿ ಕಬ್ಬಿಣದ ಚೂರು ಕಣ್ಣಿಗೆ ತಾಗಿ ಗಾಯವಾಗುತ್ತದೆ. ಪರೀಕ್ಷಿಸಿದ ವೈದ್ಯರು ಕಣ್ಣು ಬರುವ ಸಾಧ್ಯತೆ ಕಡಿಮೆ ಎಂದಾಗ ಆತ ಚಿಂತಾಕ್ರಾಂತನಾಗುತ್ತಾನೆ.

ನಾನೇನಾದರೂ ರಂಜಿತಾಳನ್ನು ಮದುವೆಯಾದರೆ ಮುಂದಿನ ದಿನಗಳಲ್ಲಿ ಕುರುಡನ ಜೊತೆ ಜೀವನ ನಡೆಸಬೇಕಾಗುತ್ತದೆ ಹಾಗಾಗಬಾರದು. ಆ ಹುಡುಗಿಯ ಭವಿಷ್ಯ ಹಸನಾಗಿರಬೇಕೆಂಬ ಸಂಕಲ್ಪ ಮಾಡಿದ ಆ ಯುವಕ ನಾನಿನ್ನು ಬದುಕಿದ್ದರೆ ಆಕೆಯನ್ನು ಕೊಟ್ಟು ಮದುವೆ ಮಾಡಿಬಿಡುತ್ತಾರೆ ಎಂದು ರಂಜಿತಾಳ ಉತ್ತಮ ಭವಿಷ್ಯವನ್ನು ನೆನೆದು ಆತ್ಮಹತ್ಯೆಗೆ ಶರಣಾಗುತ್ತಾನೆ.

ಮದುವೆಯಾದರೆ ಆತನನ್ನೇ ಎಂಬ ಮನೋಭಾವನೆಯನ್ನು ಇಟ್ಟುಕೊಂಡಿದ್ದ ರಂಜಿತಾಳಿಗೆ ಆ ಯುವಕನ ಸಾವು ಸಿಡಿಲಂತೆ ಬಂದೆರಗಿದ್ದು ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆಕೆಗೆ ಇರಲಿಲ್ಲವೆಂದೆನಿಸುತ್ತದೆ. ಇದೇ ಕೊರಗಿನಲ್ಲಿ ಆಕೆಯೂ ಕೂಡ ಆತನ ದಾರಿಯನ್ನೇ ಹಿಡಿಯುತ್ತಾಳೆ. ಆಕೆಯ ಜೀವನ ಚನ್ನಾಗಿರಲೆಂದು ಆತ ತನ್ನ ಪ್ರಾಣವನ್ನು ತ್ಯಾಗ ಮಾಡಿದರೆ, ಮದುವೆಯಂತಾದರೆ ಆತನನ್ನೇ ಮದುವೆಯಾಗುತ್ತೇನೆಂದು ಸಂಕಲ್ಪ ಮಾಡಿದ ಈಕೆ ಬೇರೊಬ್ಬರ ಜೊತೆ ಜೀವನ ಹಂಚಿಕೊಳ್ಳುವ ಮನಸ್ಸನ್ನು ಮಾಡದೆ ಆತನ ಹಾದಿಯನ್ನು ಹಿಡಿದಿದ್ದು ನಿಜಕ್ಕೂ ಬೇಸರದ ಸಂಗತಿ. ಮಾನವೀಯತೆಗೆ ಬೆಲೆ ತೆತ್ತು ಕಣ್ಮರೆಯಾದ ಈ ಎರಡು ಜೀವಗಳು ಸ್ವರ್ಗದಲ್ಲಾದರೂ ಒಂದಾಗಲಿ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ