ಭೀಕರ ರಸ್ತೆ ಅಪಘಾತ ನಾಲ್ವರು ದುರ್ಮರಣ !

Kannada News

06-10-2017

ಬೆಂಗಳೂರು: ನಗರದ ಹೊರವಲಯದ ರಾಮನಗರದ ಕೆಂಪನಹಳ್ಳಿ ಗೇಟ್ ಬಳಿ ಶುಕ್ರವಾರ ನಸುಕಿನಲ್ಲಿ ಕಂಟೈನರ್ ಲಾರಿ ಹಾಗೂ ವೆರ್ನಾ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಜೋಯದ್ ಜೇಕಬ್(21) ದಿವ್ಯ(20) ವೆಲ್ಲೂರಿನ ವಿಐಟಿಯು ಕಾಲೇಜಿನ ವಿದ್ಯಾರ್ಥಿನಿ ಎಂದು ಜೀನಾ(21)ಹಾಗೂ ಮತ್ತೊಬ್ಬ ವಿದ್ಯಾರ್ಥಿ ನಿಖಿತ್(20)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.

ಕೇರಳ ಮೂಲದ ಜೋಯದ್ ಜೇಕಬ್ ಹಾಗೂ  ದಿವ್ಯ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿದ್ದು ನಿನ್ನೆ ಕೇರಳದಿಂದ ಬಂದಿದ್ದ ಜೀನಾ ಹಾಗೂ ಮತ್ತೊಬ್ಬ ವಿದ್ಯಾರ್ಥಿ ನಿಖಿತ್ ಜೊತೆ ರಾತ್ರಿ 11ರ ವೇಳೆ ನಗರದ ಹೊರವಲಯದಲ್ಲಿ ಕಾಫಿ ಕುಡಿಯಲು ಜಾಲಿ ರೈಡ್‍ಗೆ ಹೋಗಿದ್ದು ಈ ದುರ್ಘಟನೆಗೆ ಕಾರಣವಾಗಿದೆ.

ರಾತ್ರಿಯಿಡೀ  ಜೋಯದ್ ಜೇಕಬ್ ತನ್ನ ವೆರ್ನಾ ಕಾರಿನಲ್ಲಿ ಮೂವರ ಜೊತೆ ಜಾಲಿರೈಡ್ ಮಾಡಿ ಮುಂಜಾನೆ 3.45ರ ವೇಳೆ ನಗರದ ಕಡೆ ಹೊರಟಿದ್ದಾರೆ ಮಾರ್ಗ ಮಧ್ಯೆ ಕೆಂಪನಹಳ್ಳಿ ಗೇಟ್ ಬಳಿ ಅತಿ ವೇಗವಾಗಿ ಹೋಗುತ್ತಾ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆ ಬಂದಿದ್ದು ಎದುರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಜೇಕಬ್ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಮನಗರ ಸಂಚಾರ ಪೊಲೀಸರು ಸಂಪೂರ್ಣ ಜಖಂಗೊಂಡಿದ್ದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದ ಜೇಕಬ್ ನಿದ್ದೆ ಮಂಪರಿಗೆ ಜಾರಿದ್ದು ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್‍ಪಿ ಎಂ.ಕೆ.ತಮ್ಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ