ಇಶಿಗುರೊಗೆ ನೊಬೆಲ್ ಸಾಹಿತ್ಯ ಪುರಸ್ಕಾರ

Kannada News

05-10-2017

ಈ ಬಾರಿಯ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಜಪಾನ್ ಮೂಲದ ಇಂಗ್ಲಿಷ್ ಬರಹಗಾರ ಕಜುವೊ ಇಶಿಗುರೊ ಅವರಿಗೆ ನೀಡಲಾಗಿದೆ ‘Remains of the Day’ ಎಂಬ ಕಾದಂಬರಿ ಇಶಿಗುರೊ ಅವರಿಗೆ ನೊಬೆಲ್ ಪಾರಿತೋಷಕವನ್ನು ತಂದುಕೊಟ್ಟಿದೆ. ‘ಗಾಢವಾದ ಭಾವನಾತ್ಮಕ ಬಲವುಳ್ಳ ಇಶಿಗುರೊ ಅವರ ಕಾದಂಬರಿಗಳು, ಜಗತ್ತಿನೊಂದಿಗೆ ನಾವು ಹೊಂದಿರುವ ಸಂಬಂಧಗಳ ಭ್ರಾಂತಿಯ ಆಳವನ್ನು ಬಯಲು ಮಾಡುತ್ತವೆ’ ಎಂದು ನೊಬೆಲ್ ಸಮಿತಿ ಹೇಳಿದೆ.

ನೊಬೆಲ್ ಅಕಡೆಮಿಯ ಕಾರ್ಯದರ್ಶಿ ಸಾರಾ ಡೇನಿಯಸ್ ಅವರು ‘ಕಜುವೊ ಇಶಿಗುರೊ, ಒಬ್ಬ ನಿಷ್ಠಾವಂತ ಬರಹಗಾರ, ಅತ್ತಿತ್ತ ನೋಡುವ ಅಭ್ಯಾಸವಿಲ್ಲದ ಇಶಿಗುರೊ, ತಮ್ಮದೇ ಆದ ಸುಂದರ ಜಗತ್ತನ್ನು ಕಟ್ಟಿಕೊಂಡಿದ್ದಾರೆ’ ಎಂದು ಬಣ್ಣಿಸಿದ್ದಾರೆ.

62ರ ಹರೆಯದ ಕಜುವೊ ಇಶಿಗುರೊ, ತಾವು ಐದು ವರ್ಷದ ಬಾಲಕರಾಗಿದ್ದಾಗ, ತಂದೆ ತಾಯಿಗಳೊಂದಿಗೆ ಇಂಗ್ಲೆಂಡಿಗೆ ಬಂದು ನೆಲೆಸುತ್ತಾರೆ. ಒಂದಷ್ಟು ಕಾಲ ಸಂಗೀತಗಾರನಾಗಿ ಕೆಲಸ ಮಾಡಿದ ಇಶಿಗುರೊ, ಆನಂತರ ಸಾಹಿತ್ಯದತ್ತ ಒಲವು ಬೆಳೆಸಿಕೊಂಡು, 1982ರಲ್ಲಿ ಮೊದಲ ಕಾದಂಬರಿ ಪ್ರಕಟಿಸುತ್ತಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ