ಸ್ನೇಹಿತೆಗಾಗಿ ಪ್ರಾಣ ಬಿಟ್ಟ ಯುವತಿ !

Kannada News

05-10-2017

ಬೆಂಗಳೂರು: ಶ್ರೀರಾಮಪುರದ ಲಕ್ಷ್ಮಿನಾರಾಯಣಪುರದಲ್ಲಿ ನಿನ್ನೆ ರಾತ್ರಿ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತೀವ್ರವಾಗಿ ನೊಂದಿದ್ದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಲಕ್ಷ್ಮಿನಾರಾಯಣಪುರದ 5ನೇ ಕ್ರಾಸ್‍ ನ ಭುವನೇಶ್ವರಿ (20)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಬಿ.ಕಾಂ.ಪದವಿ ಮುಗಿಸಿ ಮನೆಯಲ್ಲಿದ್ದ ಭುವನೇಶ್ವರಿಯ ಅಚ್ಚುಮೆಚ್ಚಿನ ಸ್ನೇಹಿತೆ ರಶ್ಮಿ ಮೂರು ತಿಂಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಲ್ಲಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಭುವನೇಶ್ವರಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಿ ಒಂಟಿಯಾಗಿ ಬಿಡದಂತೆ ಮನೆಯವರು ನೋಡಿಕೊಳ್ಳುತ್ತಿದ್ದರು. ಆದರೂ ಭುವನೇಶ್ವರಿ ಮಾನಸಿಕ ಪರಿಸ್ಥಿತಿ ಸುಧಾರಿಸಿರಲಿಲ್ಲ. ನಿನ್ನೆ ಸಂಜೆ 6ರ ವೇಳೆ ಭುವನೇಶ್ವರಿಯ ತಾಯಿ ತರಕಾರಿ ತರಲು ಮಾರುಕಟ್ಟೆಗೆ ಹೋಗಿಬರುವಷ್ಟರಲ್ಲಿ ಆಕೆ ನೇಣು ಬಿಗಿದು ಆತ್ಮಹತ್ಯ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಶ್ರೀರಾಮಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ