ಸಿಡಿಲ ಹೊಡೆತಕ್ಕೆ ಸಾವು !

Kannada News

05-10-2017

ಮೈಸೂರು: ಮಳೆಗೆ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದ ನಾಲ್ಕು ಮಂದಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆಯು, ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ನಂದಿನಾಥಪುರ ಗ್ರಾಮದಲ್ಲಿ ನಡೆದಿದೆ. ಹುಣಸವಾಡಿ ಗ್ರಾಮದ ಪುಟ್ಟಣ್ಣ, ಸುವರ್ಣಮ್ಮ, ಸುಜಯ್ ಮೃತಪಟ್ಟ ದುರ್ದೈವಿಗಳು. ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಇಂದು ಮಧ್ಯಾಹ್ನ ಭಾರೀ ಮಳೆ ಸುರಿಯುತ್ತಿದ್ದು, ಆಶ್ರಯಕ್ಕಾಗಿ ಸುಮಾರು 8 ಮಂದಿ ನಂದಿನಾಥಪುರದ ದೇಗುಲವೊಂದರಲ್ಲಿ ಆಶ್ರಯ ಪಡೆಯುವ ವೇಳೆ ಸಿಡಲು ಬಡಿದು ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಪಿರಿಯಾಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಮೈಸೂರು ಸಿಡಿಲ ಹೊಡೆತಕ್ಕೆ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ