ನೋಡಿ ಎಲ್ಇಡಿ ಸೀರೆ..

Kannada News

05-10-2017

ಸೀರೆ ನಮ್ಮ ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ. ಹೀಗಾಗಿ ಸೀರೆಯಲ್ಲಿ ಎಷ್ಟೇ ವೆರೈಟಿ ಡಿಸೈನ್‍ ಗಳು ಇದ್ದರು ಕೂಡಾ ಕಡಿಮೆಯೇ. ಇತ್ತೀಚೆಗೆ ಸಣ್ಣಪುಟ್ಟ ಫಂಕ್ಷನ್‍ ನಿಂದ ಹಿಡಿದು ದೊಡ್ಡ ಮದುವೆ ರಿಸೆಪ್ಷನ್‍ ವರೆಗಿನ ವಿವಿಧ ಕಾರ್ಯಕ್ರಮಗಳಿಗೆ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಮಹಿಳೆಯರು ಈಗ ಎಲ್ಇಡಿ ಸೀರೆಯತ್ತ ಮನಸ್ಸು ಮಾಡುತ್ತಿದ್ದಾರೆ. ಎಲ್ಇಡಿ ಸೀರೆ ಕುಂದನ್, ಚಮಕಿ, ಮಲ್ಟಿ ಕಲರ್, ಬೀಡ್ಸ್ ಬಳಸಿದ ಡಿಫರೆಂಟ್ ಡಿಸೈನ್‍ ಗಳಲ್ಲಿ ರೆಡಿಯಾದ ಸೀರೆಯಲ್ಲ, ಆದರೂ ಕೂಡ ಇದು ಎಲ್ಲರ ಕಣ್ಣಿಗೆ ಮಿಂಚುತ್ತಿದೆ. ನೋಡಲು ಸುಂದರವಾದ ಡಿಫರೆಂಟ್ ಡಿಸೈನ್ಸ್, ಆಕರ್ಷಕ ಕಲರ್ಸ್ ಹೊಂದಿರುವ ಫ್ಯಾನ್ಸಿ ಸೀರೆಗಳು ಇಂದಿನ ಫ್ಯಾಷನ್ ಯುಗದಲ್ಲಿ ಮಿಂಚಿದರೂ ಎಲ್ಇಡಿ ಸೀರೆ ಮಾತ್ರ ವೆರೈಟಿ ಸೀರೆಗಳಿಗೆ ಸೆಡ್ಡು ಹೊಡೆಯುತ್ತಿದೆ. ಇತ್ತೀಚೆಗೆ ವಾಟ್ಸ್ಆಪ್, ಫೇಸ್‍ ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಇಡಿ ಸೀರೆ ವೈರಲ್ ಆಗಿದೆ. ಸೀರೆಯನ್ನು ತೊಟ್ಟರೆ ಎಲ್ಇಡಿ ಲೈಟ್ಸ್ ಮಿನುಗುತ್ತವೆ. ಬ್ಲೌಸ್‍ ಗೂ ಕೂಡ. ಡಿಸೈನ್‍ ಗೆ ತಕ್ಕಂತೆ ಲೈಟ್ಸ್ ಅಳವಡಿಸಲಾಗಿದೆ. ನೋಡುಗರಿಗೆ ಕಲರ್ ಫುಲ್ ಎಲ್ಇಡಿ ಲೈಟ್ಸ್ ನಿಂದ ಡಿಫರೆಂಟ್ ಲುಕ್ ನೀಡುವುದೇ ಈ ಸೀರೆಯ ಸ್ಪೆಷಲ್. ಹೀಗಾಗಿಯೇ ಎಲ್.ಇ.ಡಿ ಸ್ಯಾರಿ, ಪಾರ್ಟಿ, ಫಂಕ್ಷನ್ಸ್ ಗಳಿಗೆ ಹೇಳಿ ಮಾಡಿಸಿದಂತಿದ್ದು, ಹೆಂಗಳಿಯರ ಮನ ಗೆಲ್ಲುತ್ತಿದೆ. ಈ ಸೀರೆಯಲ್ಲಿ ಸೆರಗು ಹಾಗೂ ನೆರಿಗೆಗೆ ಕುಂದನ್ ವರ್ಕ್ ಮಾಡುವ ಬದಲಿಗೆ ಎಲ್ಇಡಿ ಲೈಟ್ಸ್ ಹಾಕಲಾಗಿದೆ. ಸೀರೆಯ ಸಿಂಗಲ್ ಲೇಯರ್ ಸೆರಗಿಗೆ ಉದ್ದವಾಗಿ ಹೊಳೆಯುವ ಕಲರ್ ಫುಲ್  ಲೈಟ್ಸ್ ಇದ್ದರೆ ಹೇಳಬೇಕಾ..? ಸೀರೆಯುಟ್ಟ ಮಹಿಳೆಯೂ ಅಂದ ಸೀರೆಯೂ ಚಂದ, ನೋಡಲೂ ಕೂಡ ಆನಂದ. ಒಟ್ಟಿನಲ್ಲಿ ಎಲ್.ಇ.ಡಿ ಸೀರೆ ಎಲ್ಲರ ಗಮನ ಸೆಳೆಯುತ್ತಿರುವುದಂತು ಸತ್ಯ.


ಸಂಬಂಧಿತ ಟ್ಯಾಗ್ಗಳು

ಆಕರ್ಷಕ ನೋಡಿ ಎಲ್ಇಡಿ ಸೀರೆ..


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ