ಪೌರಕಾರ್ಮಿಕರನ್ನು ಶ್ಲಾಘಿಸಿದ ಮೇಯರ್ !

Kannada News

05-10-2017

ಬೆಂಗಳೂರು: ವಾಲ್ಮೀಕಿ ಜಯಂತಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸಂಪತ್‌ ರಾಜ್ ವಿಭಿನ್ನವಾಗಿ ಆಚರಿಸಿದ್ದಾರೆ. ಪುಲಿಕೇಶಿನಗರದ ಪೌರಕಾರ್ಮಿಕರ ಜೊತೆ ವಾಲ್ಮೀಕಿ ಜಯಂತಿ ಆಚರಿಸಿದ ಮೇಯರ್ ಸಂಪತ್‌ ರಾಜ್, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ, ಪೌರಕಾರ್ಮಿಕರ ಜೊತೆ ಉಪಹಾರ ಸವಿದರು. ಪೌರಕಾರ್ಮಿಕರ ಕೆಲಸವನ್ನು ಶ್ಲಾಘಿಸಿದ ಮೇಯರ್, ಪೌರಕಾರ್ಮಿಕರಿಗೆ ಹಾರ ಹಾಕಿ ಗೌರವಿಸಿ, ಇನ್ನಷ್ಟು ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಪ್ರೋತ್ಸಾಹಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ