ಚಾಮುಂಡಿಯ ಮಹಾರಥ !

Kannada News

05-10-2017

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಜಯದಶಮಿ ನಂತರ ನಡೆಯಲಿರುವ ಚಾಮುಂಡೇಶ್ವರಿ ಮಹಾ ರಥೋತ್ಸವ ಇಂದು ನಡೆಯಿತು. ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವದಲ್ಲಿ, ಯದುವಂಶದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಮಾತೆ ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡಿದ್ದರು. ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿದ್ದು, ಬೆಳಿಗ್ಗೆ 8.05 ರ ತುಲಾ ಲಗ್ನದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಎಳೆದು ರಥೋತ್ಸವಕ್ಕೆ ಯದುವೀರ್ ಚಾಲನೆ ನೀಡಿದರು. ಯದುವೀರ ರಥದಲ್ಲಿನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ರಥ ಚಲಿಸುತ್ತಿದ್ದಂತೆ ಹರ್ಷೋದ್ಘಾರದಿಂದ ಜೈಕಾರ ಹಾಕಿದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ದೂರದಿಂದಲೇ ರಥೋತ್ಸವ ವೀಕ್ಷಿಸಿದರು. ಪ್ರಧಾನ ಅರ್ಚಕರು ರಾಜವಂಶಸ್ಥರಿಗೆ ಮಹಾಮಂಗಳಾರತಿ ನೀಡಿ ಆಶೀರ್ವಾದ ಮಾಡಿದರು. ಮಹಾರಥ ದೇವಾಲಯದ ಸುತ್ತ ಒಂದು ಸುತ್ತು ಹಾಕಿದೆ. ರಥೋತ್ಸವ ಆರಂಭವಾಗುತ್ತಿದ್ದಂತೆ ಕುಶಾಲತೋಪು ಸಿಡಿಸಿ ಚಾಮುಂಡಿಗೆ ಗೌರವ ಅರ್ಪಿಸಲಾಯಿತು. ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ಚಾಮುಂಡಿಯ ಮಹಾರಥ ! ಮಹಾರಥ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ