ಗೋಡೆ ಕುಸಿದು ಜನ ಅಪ್ಪಚ್ಚಿ !

Kannada News

05-10-2017

ಬೆಂಗಳೂರು: ಕೃಷ್ಣಗಿರಿಯ ಚೋಟಂಪಲ್ಲಿಯ ತಂಡೆಕುಪ್ಪಂ ಬಳಿ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆ ಗೋಡೆ ಕುಸಿದು ಒಂದೇ ಕುಟುಂಬ ಐವರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

ಚೋಟಂಪಲ್ಲಿಯ ರಾಧಾ (65), ಮಗಳು ಪುಷ್ಪ (35), ಮೊಮ್ಮಕಳಾದ ವಸಂತ ಕುಮಾರ್ (15), ಭಗವತಿ (13), ಮುಲ್ಲೈ (8) ಸಾವನ್ನಪ್ಪಿದ ಒಂದೇ ಕುಟುಂಬದ ದುರ್ದೈವಿಗಳಾಗಿದ್ದಾರೆ. ಗಾಯಗೊಂಡಿರುವ ಕಟ್ಟಿಯಾರ್ ಅರುಣ್ ಮತ್ತು ವಟ್ಟಚರೈ, ಕನ್ನಿಯಪ್ಪನ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚೋಟಂಪಲ್ಲಿ ಮೃತ ದುರ್ದೈಗಳು ವಾಸಿಸುತ್ತಿದ್ದ ಕುಟೀರ (ಗುಡಿಸಲು) ಮೇಲೆ ಪಕ್ಕದ ಮನೆಯ ಮನೆಯ ಗೋಡೆ ಮಳೆಯಿಂದ ನೆನೆದು ಕುಸಿದು ಬಿದ್ದಿದೆ. ಕುಟೀರದಲ್ಲಿ ಮಲಗಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಗಾಯಗೊಂಡ ಕಟ್ಟಿಯಾರ್ ಅರುಣ್ ಮತ್ತು ವಟ್ಟಚರೈ ಕನ್ನಿಯಪ್ಪನ್‍ರನ್ನು ಸ್ಥಳೀಯರು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗಾಗಿ ಕೃಷ್ಣಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ