ಹಂದಿಜ್ವರಕ್ಕೆ ಬಲಿ

Kannada News

16-02-2017

ಹೈದರಾಬಾದ್ : ಹೈದ್ರಾಬಾದ್ನಲ್ಲಿ ಎಚ್1ಎನ್1 ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅವರ ಪೈಕಿ ಒಬ್ಬನನ್ನು ಜನವರಿ 11ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವೈರಲ್ ಫೀವರ್ ಮತ್ತು ಶ್ವಾಸಕೋಶದ ತೊಂದರೆಯಿಂದ ಹಲವರು ಬಳಲುತ್ತಿದ್ದಾರೆ, ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸ್ತಾ ಇದೆ ಅಂತಾ ಹಿರಿಯ ವೈದ್ಯರು ತಿಳಿಸಿದ್ದಾರೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಶ್ವಾಸಕೋಶದ ಸಮಸ್ಯೆ ನಿವಾರಣೆಗಾಗಿ ECMO ಎಂಬ ಚಿಕಿತ್ಸೆ ನೀಡಲಾಗುತ್ತಿದೆ.

ಶ್ವಾಸಕೋಶಕ್ಕೆ ತೀವ್ರ ಹಾನಿಗೊಳಗಾಗಿರುವ ರೋಗಿಗಳು ಬದುಕುಳಿಯುವುದು ಕಷ್ಟ ಎನ್ನುತ್ತಾರೆ ವೈದ್ಯರು. ರಾಜ್ಯದಲ್ಲಿ ಕೇವಲ ಜನವರಿ ತಿಂಗಳಿನಲ್ಲೇ ಹಂದಿ ಜ್ವರದಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಗಾಂಧಿ ಆಸ್ಪತ್ರೆಯಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 6 ಮಕ್ಕಳಿದ್ದಾರೆ. ಜನವರಿಯಲ್ಲಿ ಒಟ್ಟು 150 ಜನರಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿದೆ. ರಾತ್ರಿ ವೇಳೆ ರಾಜ್ಯದಲ್ಲಿ ಉಷ್ಣಾಂಶ ಅತ್ಯಂತ ಕಡಿಮೆಯಾಗಿ ಚಳಿ ಇದ್ದಿದ್ದರಿಂದ ಸೋಂಕು ವೇಗವಾಗಿ ಹರಡಿದೆ ಎನ್ನಲಾಗ್ತಿದೆ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ