ಅರ್ನಾಬ್ ಹೊಸ ಚಾನಲ್ ಹೆಸರು ಬಹಿರಂಗ..

Kannada News

26-01-2017

ನವೆಂಬರ್’ನಲ್ಲಿ ಟೈಮ್ಸ್’ನೌ ಸುದ್ದಿ ವಾಹಿನಿಯಿಂದ ಹೊರಬಂದಿದ್ದ ಅರ್ನಾಬ್ ಗೋಸ್ವಾಮಿ ಅವರ ಹೊಸ ಚಾನಲ್ ಹೆಸರು ಬಹಿರಂಗವಾಗಿದೆ. ರಿಪಬ್ಲಿಕ್ ಎಂಬ ಹೆಸರಿನಲ್ಲಿ ಅರ್ನಾಬ್ ಗೋಸ್ವಾಮಿ ಹೊಸ ಚಾನಲ್ ಶುರು ಮಾಡುತ್ತಿದ್ದಾರೆ. 2017ರ ಮೊದಲಾರ್ಧದಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಈ ಚುನಾವಣೆಗೂ ಮುಂಚೆ ರಿಪಬ್ಲಿಕ್ ಚಾನಲ್ ಕಾರ್ಯಾರಂಭವಾಗಲಿದೆ. ನ್ಯೂಸ್ ಅವರ್ ಎಂಬ ಕಾರ್ಯಕ್ರಮದ ಮೂಲಕ ಅರ್ನಾಬ್ ಗೋಸ್ವಾಮಿ ದೇಶಾದ್ಯಂತ ಜನಪ್ರಿಯರಾಗಿದ್ದರು. ಅವರು ಇತ್ತೀಚೆಗೆ ಟೈಮ್ಸ್ ನೌಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಇದೀಗ ಅವರು ತಮ್ಮದೇ ಆದ ಹೊಸ ಇಂಗ್ಲೀಷ್ ನ್ಯೂಸ್ ಚಾನಲ್ ಆರಂಭಿಸುತ್ತಿದ್ದಾರೆ. ಬೆಂಗಳೂರಿನಲ್ಲೇ ಪ್ರಧಾನ ಕಚೇರಿ ಇರುತ್ತದೆ ಎಂದು ಹೇಳಲಾಗುತ್ತಿದೆ. ಈ ಚಾನಲ್ ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ