ಬದುಕನ್ನು ಕಸಿದುಕೊಂಡ ಗೋಡೆ !

Kannada News

04-10-2017

ಬೆಂಗಳೂರು: ನಗರದ ಮಲ್ಲೇಶ್ವರಂ ನ ಮಂತ್ರಿಮಾಲ್ ಗೋಡೆ ಕುಸಿದು ಕಾಲು ಕಳೆದುಕೊಂಡ ಯಶೋಧ ಎನ್ನುವ ಸಿಬ್ಬಂದಿ ಸರಿಯಾದ ಚಿಕಿತ್ಸೆ ನೆರವು ಸಿಗದೇ ಅತಂತ್ರರಾಗಿದ್ದಾರೆ .

ಎರಡು ಮಕ್ಕಳ ತಾಯಿಯಾಗಿರುವ ಯಶೋಧ ಇಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದ್ದು, ಅವರ ಮಂತ್ರಿ ಮಾಲ್‍ ನ ಆಡಳಿತ ಮಂಡಳಿ ಎನ್ನುವ ಆರೋಪ ಕೇಳಿಬಂದಿದೆ. ಮಂತ್ರಿ ಮಾಲ್‍ ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜನವರಿ 15ರಂದು ಗೋಡೆ ಕುಸಿದು ಕಾಲು ಕಳೆದುಕೊಂಡಿದ್ದರು.ಈ ಬಗ್ಗೆ ದೂರು ಕೊಡಬೇಡಿ. ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದಿದ್ದ ಮಂತ್ರಿ ಮಾಲ್‍ ನ ಆಡಳಿತ ಮಂಡಳಿ ಯಶೋಧರ ಕೈ ಬಿಟ್ಟಿದ್ದಾರೆ.

ಯಶೋಧ ಅವರ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಬಲಗಾಲಿನ ಮಂಡಿ ಚಿಪ್ಪಿಗೆ ಸರ್ಜರಿ ಮಾಡಿಸಿಕೊಳ್ಳುವುದಕ್ಕೂ, ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ಮೂರು ತಿಂಗಳಿಂದ ಸಂಬಳ ಇಲ್ಲದೇ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಯಶೋಧರ ಮನೆಯಲ್ಲಿದೆ. ಜೀವನಕ್ಕೆ ಆಸರೆಯಾಗಿದ್ದ ಟೈಲರಿಂಗ್ ಸಹ ಮಾಡಲಾಗದ ಪರಿಸ್ಥಿತಿಯಲ್ಲಿ ಇಡೀ ಕುಂಟುಂಬ ಕಣ್ಣೀರಿಡುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ