ಬಿಎಂಟಿಸಿ ಡ್ರೈವರ್ ಮೇಲೆ ಹಲ್ಲೆಗೆ ಯತ್ನ !

Kannada News

04-10-2017

ಬೆಂಗಳೂರು: ಚಾಲುಕ್ಯ ವೃತ್ತದ ಬಳಿ, ನಿನ್ನೆ ರಾತ್ರಿ  ಕುಡಿದು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ, ಸವಾರನೊಬ್ಬ ಕಾರ್ಯನಿರತ ಬಿಎಂಟಿಸಿ ಚಾಲಕರೊಬ್ಬರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಎಂಟಿಸಿ ಬಸ್‍ ಚಾಲಕ ಆಂಥೋಣಿ ಅವರು ಬೆಮಲ್ ಕಂಪನಿಯ ನೌಕರರನ್ನು ಕರೆದುಕೊಂಡು, ರಾತ್ರಿ ಚಾಲುಕ್ಯ ಸರ್ಕಲ್ ಬಳಿ ಬರುವಾಗ ಬಸ್ಸನ್ನು ಓವರ್ ಟೆಕ್ ಮಾಡುಲು ಬೈಕ್ ಸವಾರ ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ, ನಂತರ ಸಿಗ್ನಲ್ ಹತ್ತಿರ ಬಂದು ಡ್ರೈವರ್‍ ಗೆ ಬೈಯ್ದು ನಂತರ ಬಸ್ ಒಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಸವಾರ ನಂತರ ಗೇರ್ ಲಿವರ್ ಹಿಡಿದು ಬಸ್ ಮುಂದಕ್ಕೆ ಹೋಗಲು ಬಿಟ್ಟಿಲ್ಲ. ಆದರೆ ಬಸ್ ಒಳಗಿದ್ದವರ ಬೈಕ್ ಸವಾರನನ್ನು ತಡೆದಿದ್ದಾರೆ. ಈ ವೇಳೆ ಬಸ್ ಡ್ರೈವರ್ ಡೋರ್ ಲಾಕ್ ಮಾಡಿಕೊಂಡ ನೇರವಾಗಿ ಕಮೀಷನರ್ ಆಫೀಸ್‍ಗೆ ಹೋಗಿ ವಿಷಯ ತಿಳಿಸಿದ್ದಾರೆ. ಬಿಎಂಟಿಸಿ ಡ್ರೈವರ್ ಮೇಲೆ ಹಲ್ಲೆಗೆ ಯತ್ನಿಸಿದ್ದ ಬೈಕ್ ಸವಾರನನ್ನು ಹೈ ಗ್ರೌಂಡ್ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ