ಕಳ್ಳರ ಬಂಧನ: 1 ಕೋಟಿ ಮಾಲು ವಶ !

Kannada News

04-10-2017

ಬೆಂಗಳೂರು: ಮನೆ ಕಳವು, ವಾಹನ ಕಳವು, ಲ್ಯಾಪ್ಟಾಪ್ ಕಳವು ಸೇರಿದಂತೆ 25 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸಿ ಭರ್ಜರಿ ಭೇಟೆಯಾಡಿರುವ ವೈಟ್‍ ಫೀಲ್ಡ್ ಪೊಲೀಸರು 23 ಮಂದಿ ಆರೋಪಿಗಳನ್ನು ಬಂಧಿಸಿ 1 ಕೋಟಿಗೂ ಹೆಚ್ಚಿನ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಪುರಂ ನಲ್ಲಿ ಮನೆ ಕಳವು ಮಾಡಿದ್ದ 1 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಕೃತ್ಯ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ನಕಲಿ ಕೀ ಬಳಸಿ ಕಳವು ಮಾಡಿ ಮೋಜು ಮಾಡುತ್ತಿದ್ದ ಕಳ್ಳರನ್ನು, ಮಹದೇವಪುರ ಪೊಲೀಸರು, ಬಂಧಿಸಿ 39 ಬೈಕ್ ಗಳನ್ನು ವಶಪಡಿಸಿಕೊಂಡಿದ್ದರೆ, 7 ಲ್ಯಾಪ್ ಟಾಪ್ ಗಳನ್ನು ಕಳವು ಮಾಡಿದ್ದವರನ್ನು, ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕಳವು ಮಾಲುಗಳನ್ನು ವಾರಸುದಾರರಿಗೆ ನೀಡಿದ ಆಯುಕ್ತರು, ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರಿಗೆ ನಗದು ಬಹುಮಾನ ನೀಡಿ ಗೌರವಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಅಬ್ದುಲ್ ಅಹದ್  ಈ ವೇಳೆ ಉಪಸ್ಥಿತರಿದ್ದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ