ಸಂಪ್ ಗೆ ಬಿದ್ದು ಮಗು ಸಾವು

Kannada News

04-10-2017

ಬೆಂಗಳೂರು: ಸಂಪಿಗೆ ಹಳ್ಳಿಯ ಮಸೀದಿ ಗಲ್ಲಿಯಲ್ಲಿ ನಿನ್ನೆ ರಾತ್ರಿ ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಮಗು, ಸಂಪ್ ಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮೃತ ಮಗುವನ್ನು ಗಾರೆ ಕೆಲಸ ಮಾಡುತ್ತಿದ್ದ ಚಕ್ರವರ್ತಿ ಹಾಗೂ ಸರಳ ದಂಪತಿಯ ಪುತ್ರಿ ಸಾಧನ ಎಂದು ಗುರುತಿಸಲಾಗಿದೆ. ರಾತ್ರಿ 7.45ರ ವೇಳೆ ಕುಡಿಯುವ ನೀರು ಬರುತ್ತಿದ್ದರಿಂದ, ಸಂಪ್ ನ ಮುಚ್ಚಳ ತೆಗೆದ ತಾಯಿ ಸರಳ ನೀರನ್ನು ಹಿಡಿದುಕೊಂಡು ಒಳ ಹೋಗಿದ್ದರು.

ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಸಾಧನ, ಆಯ ತಪ್ಪಿ ಸಂಪ್‍ ಗೆ ಬಿದ್ದಿದೆ. ಮತ್ತೆ ಹೊರ ಬಂದ ಸರಳ, ಮತ್ತೆ ನೀರು ತುಂಬಿಸಿಕೊಂಡು ಒಳ ಹೋಗಿದ್ದು, ಮಗು ಅದರಲ್ಲಿ ಬಿದ್ದಿರುವುದು ಗೊತ್ತಾಗಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಆಟವಾಡುತ್ತಿದ್ದ ಮಗು ಎಲ್ಲಿ ಹೋಯಿತು ಎಂದು ಹುಡುಕಾಟ ನಡೆಸಿದ್ದಾರೆ, ಅದಾಗಲೆ ಮಗು ಮೃತಪಟ್ಟಿತ್ತು. ಪ್ರಕರಣ ದಾಖಲಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ