ಎಲ್ಲರಿಗೂ ಟಿಕೆಟ್ ನೀಡೋಕ್ಕಾಗುತ್ತಾ..!

Kannada News

04-10-2017

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಬೆಳಿಗ್ಗೆ ಮೈಸೂರಿನ ಟಿ.ಕೆ ಲೇಔಟ್‍ ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಗಾಗಿ ಹಲವಾರು ಮಂದಿ ಪೈಪೋಟಿ ನಡೆಸಿದ್ದಾರೆ. ಅಂದ ಮಾತ್ರಕ್ಕೆ ಎಲ್ಲರಿಗೂ ಟಿಕೆಟ್ ನೀಡೋದಕ್ಕೆ ಆಗತ್ತಾ? ಎಲ್ಲಾ ವರ್ಗದವರು ಮತ ಹಾಕ್ತಾರೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಿಕೆಟ್ ನೀಡುವ ಅಂತಿಮ ತೀರ್ಮಾನ ಹೈಕಮಾಂಡ್‍ ನದ್ದಾಗಿರುತ್ತದೆ ಎಂದರು.

ಇನ್ನು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುವ ವಿಚಾರ ನನಗೇನು ತಿಳಿದಿಲ್ಲ. ಇದು ಕೇವಲ ಊಹಾಪೋಹಾ ಆಗಿರುವುದರಿಂದ, ಇದಕ್ಕೆ ಪ್ರತಿಕ್ರಿಯಿಸಲಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ