ಹಣಕ್ಕಾಗಿ ಕಿರುಕುಳ: ಪತ್ನಿ ಆತ್ಮಹತ್ಯೆ !

Kannada News

04-10-2017

ಬೆಂಗಳೂರು: ನಗರದ ಪೀಣ್ಯದ ದಾಸರಹಳ್ಳಿಯಲ್ಲಿ ಮಂಗಳವಾರ ಮಧ್ಯರಾತ್ರಿ  ಕುಡಿದು ಬಂದು ಪತಿ ನೀಡುತ್ತಿದ್ದ ಕಿರುಕುಳ ತಾಳಲಾರದೆ, ಪತ್ನಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ದಾಸರಹಳ್ಳಿಯ ವಿದ್ಯಾನಗರದ 2ನೇ ಕ್ರಾಸ್ ನ ಆಶಾದೇವಿ (23)ಎಂದು ನೇಣಿಗೆ ಶರಣಾದವರನ್ನು ಗುರುತಿಸಲಾಗಿದೆ. ಕಳೆದ 6 ವರ್ಷಗಳ ಹಿಂದೆ ಗುಜರಿ ವ್ಯಾಪಾರ ಮಾಡುತ್ತಿದ್ದ ಮಹೇಶ್ ಎನ್ನುವವರನ್ನು ವಿವಾಹವಾಗಿದ್ದ ಆಶಾದೇವಿಗೆ 4 ವರ್ಷದ ಮಗನಿದ್ದಾನೆ.

ಇತ್ತೀಚೆಗೆ ಕುಡಿತದ ಚಟ ಹೆಚ್ಚು ಮಾಡಿಕೊಂಡಿದ್ದ ಮಹೇಶ್, ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಿಂದ ನೊಂದ ಆಶಾದೇವಿ ರಾತ್ರಿ 1.30ರ ವೇಳೆ ಮಗು ಮಲಗಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹೇಶ್ ಬೇರೆ ಕಡೆ ಹೋಗಿದ್ದಾಗ ಈ ದುರ್ಘಟನೆ ನಡೆದಿದ್ದು, ಆಶಾದೇವಿ ಮನೆಯವರು ಮಹೇಶ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ಆಶಾದೇವೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೀಣ್ಯ ಪೊಲೀಸರು ಮಹೇಶ್‍ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ