ಮನೆ ಮನೆಗೆ ಕುಮಾರಣ್ಣ !

Kannada News

04-10-2017

ತುಮಕೂರು: ವಿಧಾನ ಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದು, ಜೆಡಿಎಸ್ ನ ಪ್ರಚಾರ ಕಾರ್ಯಕ್ರಮವಾದ 'ಮನೆ ಮನೆಗೆ ಕುಮಾರಣ್ಣ' ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿಲಾಯಿತು. ತುಮಕೂರಿನ ಸಿದ್ದಗಂಗಾ ಮಠದಲ್ಲಿ, ಮಾಜಿ ಪ್ರಧಾನಿ ದೇವೇಗೌಡರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು ಇದಲ್ಲದೇ, ಶ್ರೀಗಳ ಆರೋಗ್ಯ ವೃದ್ಧಿಗೆ ಸಿದ್ದಗಂಗಾ ಮಠದಲ್ಲಿ ವಿಶೇಷ ಹೋಮ ನಡೆಸಿದ್ದಾರೆ. ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ, ಪರ್ಜನ್ಯ ಮಹಾಯಾಗ ಮೃತ್ಯುಂಜಯ ಹೋಮ, ಗಣಪತಿ ಹೋಮ ಸೇರಿದಂತೆ ವಿಶೇಷ ಪೂಜೆ ನೆರವೇರಿಸಿದ್ದಾರೆ.  ಇಲ್ಲಿ ನಡೆದ ವಿಶೇಷ ಹೋಮದಲ್ಲಿ, ಮಾಜಿ ಪ್ರಧಾನಿ ದೇವೇಗೌಡರು, ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಶಾಸಕರು ಭಾಗಿಯಾಗಿದ್ದರು.

 

 


ಸಂಬಂಧಿತ ಟ್ಯಾಗ್ಗಳು

ತುಮಕೂರು ಮನೆ ಮನೆಗೆ ಕುಮಾರಣ್ಣ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ