ಭೋವಿ ಸಂಘಟನೆಗಳಿಗೆ ಅವಮಾನ ಮಾಡಿದ್ದಾರೆ..?

Kannada News

04-10-2017

ಬೆಂಗಳೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಕ್ಟೋಬರ್.8ರಂದು ಭೋವಿ ಅಭಿವೃದ್ದಿ ನಿಗಮದ ಲೋಕಾರ್ಪಣಾ ಕಾರ್ಯಕ್ರಮ ನಿಗದಿಪಡಿಸಲಾಗಿದ್ದು, ಸಚಿವ ಎಚ್.ಆಂಜನೇಯ, ನಿಗಮದ ಅಧ್ಯಕ್ಷ ಸೀತಾರಾಮ್ ಹಾಗೂ ಇಲಾಖಾ ಅಧಿಕಾರಿಗಳು, ಸರ್ಕಾರದ ಈ, ಸರ್ಕಾರಿ ಕಾರ್ಯಕ್ರಮದ ಕರಪತ್ರದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟೇಶ್ ಮೌರ್ಯ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಪತ್ರವನ್ನು ಮುದ್ರಿಸುವ ಮೂಲಕ ಭೋವಿ ಸಮಾಜದ ಏಳಿಗೆಗಾಗಿ ಎಲೆಮರೆ ಕಾಯಿಗಳಾಗಿ ದುಡಿಯುತ್ತಿರುವ ಸಮಾಜದ ಮಠಾಧೀಶರು, ಹೋರಾಟಗಾರರು, ಭೋವಿ ಜನಾಂಗದ ಸಂಘಟನೆಗಳಿಗೆ ಅವಮಾನವೆಸಗಿದ್ದಾರೆ. ತಮ್ಮ ಜಿಲ್ಲೆ ಸ್ವಾಮೀಜಿ ಮತ್ತು ಇತ್ತೀಚೆಗೆ ಸಂಘಟನೆಯೊಂದನ್ನು ಪ್ರಾರಂಭಿಸಿರುವ ತನ್ನ ಚೇಲಾ ಒಬ್ಬರನ್ನು ಕರಪತ್ರದಲ್ಲಿ ಮುದ್ರಿಸುವ ಮೂಲಕ ಭೋವಿ ಜನಾಂಗವನ್ನು ಒಡೆಯುವ ಹುನ್ನಾರ ಮಾಡಿದ್ದಾರೆ ಎಂದು ಕಿಡಿಕಾರಿದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ