ಕೇರಳದಲ್ಲಿ ಯುಪಿ ಯೋಗಿ !

Kannada News

04-10-2017 477

ಮಂಗಳೂರು: ಆರ್‌.ಎಸ್‌.ಎಸ್‌. ಮತ್ತು ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆಯನ್ನು ಖಂಡಿಸಿ, ಕೇರಳದ ಕಣ್ಣೂರಿನ ಪಯ್ಯನೂರಿನಲ್ಲಿ ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಡರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ. ರಾತ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಗಿ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಈ ವೇಳೆ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಅಭಿಮಾನಿಗಳು ಕೂಡ ಸೇರಿದ್ದರು. ಬಳಿಕ ಯೋಗಿ ಅಲ್ಲಿಂದ ನೇರವಾಗಿ ರಸ್ತೆ ಮೂಲಕ ಕೇರಳದ ಕಣ್ಣೂರಿಗೆ ತೆರಳಿದರು.

 

 ಸಂಬಂಧಿತ ಟ್ಯಾಗ್ಗಳು

ಮಂಗಳೂರು ಕೇರಳದಲ್ಲಿ ಯುಪಿ ಯೋಗಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ