ಚಿಮಣಿ ಕುಸಿದು ಮೂವರು ಸಾವು !

Kannada News

04-10-2017

ಕೋಲಾರ: ಭಾರೀ ಮಳೆ ಹಿನ್ನೆಲೆ ಇಟ್ಟಿಗೆ ಕಾರ್ಖಾನೆಯಲ್ಲಿನ ಚಿಮಿಣಿ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ, ರಾಜ್ ಪೇಟ್ ರಸ್ತೆ ಬಳಿಯಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಇಂದು ಬೆಳಗಿನ ಜಾವದಲ್ಲಿ ನಡೆದಿದೆ. ಈ ಅವಘಡದಲ್ಲಿ ಬಾಷಾ(60), ಫಾತಿಮ (50) ಹಾಗೂ ಅವರ ಮೊಮ್ಮಗ ನಯಾಜ್ (5) ಎಂಬುವವರು ಸಾವನ್ನಪ್ಪಿದ್ದಾರೆ. ಜೈರಾಜ್ ಎಂಬುವರಿಗೆ ಸೇರಿದ ಹಳೆಯ ಇಟ್ಟಿಗೆ ಕಾರ್ಖಾನೆಯಾಗಿದ್ದು, ನಿರತಂತರ ಮಳೆಯಾದ ಹಿನ್ನೆಲೆಯಲ್ಲಿ ಕಾರ್ಖಾನೆ ಮೇಲಿನ ಚಿಮಿಣಿ ಕುಸಿದು ಬಿದ್ದು ಶೆಡ್‌ನಲ್ಲಿ ಮಲಗಿದ್ದ ಮೂವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಂಡ್ರಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ