ಮಾಜಿ ಐಎಎಸ್ ಅಧಿಕಾರಿಗೆ ಯುವತಿ ಬೆದರಿಕೆ

Kannada News

03-10-2017

ಬೆಂಗಳೂರು: ಮದುವೆಯಾಗುವಂತೆ ತಮ್ಮನ್ನು ಪೀಡಿಸುತ್ತಿದ್ದ ಯುವತಿ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ರೋಮನ್ ಸೈನಿ ಎಂಬ ನಿವೃತ್ತ ಐಎಎಸ್ ಅಧಿಕಾರಿ ಈ ಸಂಬಂಧ ದೂರು ನೀಡಿದ್ದಾರೆ. ತನ್ನನ್ನು ಮದುವೆಯಾಗಬೇಕು, ಅಲ್ಲದೇ ತಿಂಗಳಿಗೆ 1.6 ಲಕ್ಷ ನೀಡುವಂತೆ ಯುವತಿ ಪೀಡಿಸುತ್ತಿದ್ದಳು. ಒಂದು ವೇಳೆ ಮದುವೆ ಆಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎಂದು ರೋಮನ್ ಸೈನಿ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಚಿತ್ರಲೇಖಾ ಎಂಬ ಯುವತಿ ದಿನ ನಿತ್ಯ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ 18ನೇ ರ್ಯಾಂಕ್ ಪಡೆದಿದ್ದ  ರೋಮಾನ್ ಸೈನಿ, 2016ರಲ್ಲೇ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ಬಳಿಕ ಐಎಎಸ್ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದಾರೆ. ಈ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿಗೆ ಬಂದಿದ್ದ ಚಿತ್ರಲೇಖಾ, ತಮಗೆ ಫೇಸ್ ಬುಕ್ ಹಾಗೂ ಮೇಲ್ ನಲ್ಲಿ ಮದುವೆಯಾಗುವಂತೆ ಪಿಡಿಸುತ್ತಿದ್ದಾಳೆ ಎಂದು, ಅವರು ದೂರಿದ್ದಾರೆ. ಬುದ್ಧಿವಾದ ಹೇಳಿದರೂ ಯುವತಿ ಪದೇ ಪದೇ ಪೀಡಿಸುತ್ತಿದ್ದಾಳೆ ಎಂದು ಸೈನಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ