ಮನೆ ಬಾಗಿಲು ಮುರಿದು ಕಳ್ಳತನ !

Kannada News

03-10-2017

ಬೆಂಗಳೂರು: ನಗರದ ಸಿದ್ದಾಪುರದ ಸೋಮೇಶ್ವರ ನಗರದಲ್ಲಿ, ಮೊಹರಂ ಆಚರಣೆಗಾಗಿ ಕುಟುಂಬ ಸಮೇತ ಆಂಧ್ರ ಪ್ರದೇಶಕ್ಕೆ ತೆರಳಿದ್ದ ಫೋಟೋ ಸ್ಟುಡಿಯೋ ಮಾಲೀಕರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 3 ಲಕ್ಷ ನಗದು ಸೇರಿ ಚಿನ್ನಾಭರಣಗಳು ಕ್ಯಾಮರಾ, ಸೇರಿ ಸುಮಾರು 20 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ನಡೆದಿದೆ.

ಸೋಮೇಶ್ವರ ನಗರದ ಫೋಟೋ ಸ್ಟುಡಿಯೋ ಮಾಲೀಕ ಅಜಿತ್ ಪಾಷಾ ಅವರು 2 ದಿನಗಳ ಹಿಂದೆ ಮೊಹರಂ ಆಚರಣೆಗೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಆಂಧ್ರಕ್ಕೆ ತೆರಳಿದ್ದರು. ನಿನ್ನೆ ರಾತ್ರಿ ಆಂಧ್ರದಿಂದ ಬಂದು ನೋಡಿದಾಗ ಮನೆಯ ಮುಂಬಾಗಿಲು ಒಡೆದಿದ್ದ ದುಷ್ಕರ್ಮಿಗಳು ಒಳ ನುಗ್ಗಿ ಮನೆಯಲ್ಲಿನ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ 3 ಲಕ್ಷ ನಗದು, 6 ಲಕ್ಷ ಮೌಲ್ಯದ 2 ಕ್ಯಾಮೆರಾ 10 ಲಕ್ಷ ಮೌಲ್ಯದ ಚಿನ್ನ ಸೇರಿದಂತೆ 20 ಲಕ್ಷ ಮೌಲ್ಯದ ಮಾಲುಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ