ಪಾಳು ಮನೆಯಲ್ಲಿ ಗಾಂಜಾ: ಮೂವರು ಅರೆಸ್ಟ್

Kannada News

03-10-2017

ಬೆಂಗಳೂರು: ಪಾಳುಬಿದ್ದ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡಲು ಪ್ಯಾಕೆಟ್ ಕಟ್ಟಿಕೊಳ್ಳುತ್ತಿದ್ದ ಮೂವರನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ಇಮ್ರಾನ್ (20), ಆರ್.ಟಿ ನಗರದ ಮೊಹ್ಮದ್ ಖಲೀಲ್ (23), ಜೆಪಿ ನಗರದ ರವಿ ಅಲಿಯಾಸ್ ಪೊಂಗ (24) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 1 ಕೆಜಿ 600 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಗಾಂಜಾವನ್ನು ಬೇರೆಡೆಯಿಂದ ತಂದು ಸಣ್ಣ ಪೊಟ್ಟಣಗಳಾಗಿ ಕಟ್ಟಿ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

ಆರೋಪಿಗಳು ಗಾಂಜಾವನ್ನು ತಂದು ವಿಶ್ವೇಶ್ವರಪುರಂನ ಶ್ರೀರಾಘವೇಂದ್ರ ದೇವಾಲಯದ ಪಾಳು ಬಿದ್ದ ಮನೆಯೊಂದರ ಬಳಿ ಪ್ಯಾಕೆಟ್‍ ಗಳಾಗಿ ಕಟ್ಟುತಿದ್ದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ವಿವಿಪುರಂ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಗಾಂಜಾ ಮೂವರ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ