ನಟಿ ಸಿಂಧು ಮೆನನ್ ತಾಯಿಗೆ ಅಪಘಾತ !

Kannada News

29-09-2017

ಬೆಂಗಳೂರು: ಸಿಗ್ನಲ್‍ ನಲ್ಲಿ ನಿಂತಿದ್ದ ಆಟೋಗೆ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಚಿತ್ರನಟಿ ಸಿಂಧೂ ಮೆನನ್ ಅವರ ತಾಯಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಿನ್ನೆ ಯಶವಂತಪುರ ಸಿಗ್ನಲ್ ಬಳಿ ನಡೆದಿದೆ.

ಸಿಂಧೂ ಮೆನನ್ ಅವರ ತಾಯಿ ಶ್ರೀದೇವಿ ಮತ್ತಿಕೆರೆಯಿಂದ ಮಲ್ಲೇಶ್ವರಂನ ನಿವಾಸಕ್ಕೆ ಆಟೋದಲ್ಲಿ ತೆರಳುತಿದ್ದಾಗ ಈ ದುರಂತ ಸಂಭವಿಸಿದೆ. ನಿನ್ನೆ ಮಧ್ಯಾಹ್ನ 2.40ರ ಸುಮಾರಿಗೆ ಯಶವಂತಪುರ ಸಿಗ್ನಲ್ ಬಳಿ ನಿಂತಿದ್ದ ಆಟೋಗೆ ಹಿಂದೆಯಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆದಿದೆ. ಇದರಿಂದ ಆಟೋ ಒಳಗೆ ಕುಳಿತಿದ್ದ ಶ್ರೀದೇವಿಯವರ ಎದೆಯ ಭಾಗಕ್ಕೆ ತೀವ್ರವಾದ ಗಾಯವಾಗಿದೆ.

ಈ ವೇಳೆ ಅವರಿಗೆ ಚಿಕಿತ್ಸೆ ಕೊಡಿಸುವ ಬದಲು ಆಟೋ ಹಾಗೂ ಕ್ಯಾಬ್ ಚಾಲಕರಿಬ್ಬರು ಜಗಳಕ್ಕಿಳಿದಿದ್ದಾರೆ. ಹೀಗಾಗಿ ಒಂದು ಗಂಟೆಗಳ ಕಾಲ ಚಿಕಿತ್ಸೆ ಸಿಗದೆ ಆಟೋದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಶ್ರೀದೇವಿಯವರು ಕಡೆಗೆ ಫೋನ್ ಮುಖಾಂತರ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪುತ್ರ ಮನೋಜ್ ಬಳಿಕ ಶ್ರೀದೇವಿಯವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ರಾಮಯ್ಯ ಆಸ್ಪತ್ರೆಯ ಐಸಿಯುನಲ್ಲಿ ಸಿಂಧು ಮೆನನ್ ಅವರ ತಾಯಿ ಶ್ರೀದೇವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ