ಹಂತಕನನ್ನು ಹಿಡಿಯಲು 11 ವರ್ಷ..!

Kannada News

29-09-2017

ವಿಜಯಪುರ: ಜೋಡಿ ಕೊಲೆ ಪ್ರಕರಣದಲ್ಲಿ ಕಳೆದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಂದಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2006ರಂದು ಬಂಕಲಗಿ ಗ್ರಾಮದ ಸದಾನಂದ ಬಿರಾದಾರ ಹಾಗೂ ಆತನ ಸಹೋದರ ಪ್ರಭು ಬಿರಾದಾರ ಅವರ ಜೋಡಿ ಕೊಲೆ ನಡೆದಿತ್ತು. ಕೊಲೆಗೀಡಾದವರ ಸಹೋದರ ದೇವಿಂದ್ರ ಶರಣಪ್ಪ ಬಿರಾದಾರ ಅವರು ಸಿಂದಗಿ ಠಾಣೆಯಲ್ಲಿ ದೂರು ನೀಡಿದ್ದರು.

ಈ ಕೊಲೆ ಪ್ರಕರಣದಲ್ಲಿ ಮಲಕಪ್ಪ, ಬಸಪ್ಪ ತಳವಾರ ಸೇರಿದಂತೆ ಇತರ 14 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಕಳೆದ ಹನ್ನೊಂದು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡು ತಿರುಗುತ್ತಿದ್ದ ಬಸಪ್ಪ ತಳವಾರನನ್ನು ಇದೀಗ ಬಂಧಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ