7 ವರ್ಷ ತಲೆಮರೆಸಿಕೊಂಡಿದ್ದ ಖೈದಿ ಬಂಧನ !

Kannada News

29-09-2017

ಮೈಸೂರು: ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದು, ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖೈದಿಯನ್ನು ಬನ್ನೂರು ಪೊಲೀಸರು ಬಂಧಿಸಿದ್ದಾರೆ.

ಪರಶಿವಮೂರ್ತಿ (44) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ಪ್ರಕರಣವೊಂದರಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಖೈದಿಯಾಗಿದ್ದ ಪರಶಿವಮೂರ್ತಿ ಜೂನ್ 2011 ರಂದು ಪೆರೋಲ್ ರಜೆ ಪಡೆದು ಜೈಲಿನಿಂದ ಹೊರ ಬಂದಿದ್ದ. 90 ದಿನಗಳ ರಜೆ ಪಡೆದಿದ್ದ ಪರಶಿವಮೂರ್ತಿ ಅವಧಿ ಮುಗಿದ ನಂತರ ಹಿಂದಿರುಗಿರಲಿಲ್ಲ. ಈ ಬಗ್ಗೆ ಸೆಪ್ಟೆಂಬರ್ 2011 ರಲ್ಲಿ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೇ ಗದಗ್ ನಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದು ಜೈಲು ಸೇರಿ ಸಜಾ ಬಂಧಿಯಾಗಿದ್ದ ಪರಮಶಿವಮೂರ್ತಿ, ಪೆರೋಲ್ ಪಡೆದು ಹೊರಬಂದ ನಂತರ ತನ್ನ ಇತಿಹಾಸವನ್ನು ಮರೆಮಾಚಿ ಬಿಳಿಕೆರೆ ಹೋಬಳಿಯ ಗಾಗೇನಹಳ್ಳಿ ಗ್ರಾಮದ ಮಂಗಳಗೌರಿಯನ್ನ ವಿವಾಹವಾಗಿ ಎರಡು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ.

ಇನ್ನು ಖಚಿತ ಮಾಹಿತಿಯನ್ನಾಧರಿಸಿ, ಇನ್ಸ್‌ ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ಬನ್ನೂರು ಪೊಲೀಸರು ದಾಳಿ ನಡೆಸಿ, ತನ್ನ ಪತ್ನಿಯ ಮನೆಯಲ್ಲಿಯೇ ಖೈದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ