‘ನಿನ್ನ ಸೊಂಟ ಸೂಪರ್’ ಎಂದವನ ಬಂಧನ !

Kannada News

28-09-2017

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಾಮುಕರ ಅಟ್ಟಹಾಸ ಹೆಚ್ಚುತ್ತಿದ್ದು, ಯುವತಿಯರನ್ನು ಅಶ್ಲೀಲವಾಗಿ ನಿಂದಿಸಿದ್ದ ಇಬ್ಬರು ಕಾಮುಕರನ್ನು ಜಿಪಿನಗರ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ವಿಇಟಿ ಕಾಲೇಜು ಬಳಿ ಯುವತಿಯನ್ನು ಕಿಚಾಯಿಸಿದ ಕಾಮುಕ ಅರವಿಂದ್(20)ಬಂಧಿತ ಆರೋಪಿಯಾಗಿದ್ದಾನೆ,  ವಿಇಟಿ ಕಾಲೇಜು ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಕಾಮುಕ ಅರವಿಂದ್ `ನಿನ್ನ ಸೊಂಟ ಸೂಪರ್. ನಿನ್ನ ಚೆನ್ನಾಗಿ ನೋಡ್ಕೊಳ್ತೀನಿ ನನ್ನ ಜೊತೆ ಬರ್ತಿಯಾ' ಎಂದು ಕಿಚಾಯಿಸಿದ್ದ.

ಬಳಿಕ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾಮುಕ ಅರವಿಂದ್‍ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಯುವತಿ ದೂರು ನೀಡಲು ನಿರಾಕರಿಸಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇದೇ ರೀತಿ ರಾಮನಗರ ಮೂಲದ ಅಭಿಷೇಕ್ ಗೌಡ(21) ಕೂಡ ಯುವತಿಯನ್ನ ಕಿಚಾಯಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಜೆಪಿ ನಗರ ಮೆಟ್ರೋ ಬಳಿ ಯುವತಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಲ್ಲೇ ಇದ್ದ ಅಭಿಷೇಕ್ ಯುವತಿಯನ್ನು `ಲೇ ನಿಂತ್ಕೋಳೆ, ನನ್ನ ಜೊತೆ ಬಾ' ಎಂದು ಕಿಚಾಯಿಸಿದ್ದಾನೆ. ಯುವತಿ ಅಳುತ್ತಾ ಹೋಗುತ್ತಿರುವಾಗ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಅಭಿಷೇಕ್ ಗೌಡ ನನ್ನು ಬಂಧಿಸಿದ್ದಾರೆ. ಅಭಿಷೇಕ್ ವೃತ್ತಿಯಲ್ಲಿ ಟೆಂಪೋ ಚಾಲಕನಾಗಿ ಕೆಲಸಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ