ಬೋಟ್ ಮುಳುಗಡೆ: ಮೀನುಗಾರರ ರಕ್ಷಣೆ !

Kannada News

28-09-2017

ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೋಟ್ ಅಳಿವೆಗೆ ಸಿಲುಕಿ ಮುಳುಗಡೆಯಾದ ಘಟನೆ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಗೋಡು ಅಳಿವೆ ತೀರದಲ್ಲಿ ನೆಡೆದಿದೆ. ಯಾಸಿನ್ ಹೆಸರಿನ ಯಾಂತ್ರಿಕ ಬೋಟ್‍ ನಲ್ಲಿ ಸುಮಾರು 23 ಮೀನುಗಾರರಿದ್ದು, ಅಳಿವೆಯಲ್ಲಿ ಸಿಲುಕಿದ್ದವರನ್ನು ಮೂರು ಬೋಟ್‍ ಗಳ ಮೂಲಕ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಈ ವೇಳೆ ಯಾವುದೇ ಪ್ರಾಣಹಾನಿ ನಡೆದಿಲ್ಲ. ಕಾಸರಗೋಡು ಬಂದರು ತೀರದ ಬಳಿ ಹೆಚ್ಚು ಹೂಳು ತುಂಬಿದ್ದರಿಂದಾಗಿ ಈ ಅವಘಡ ನೆಡೆದಿದೆ. ಈ ಘಟನೆಯ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ