ಬಿಬಿಎಂಪಿಯಲ್ಲಿ ಬಿಜೆಪಿ ಡ್ರಾಮ…

Kannada News

28-09-2017

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಸಂಪತ್ ರಾಜ್ ಮತ್ತು ಉಪ ಮೇಯರ್ ಆಗಿ ಜೆಡಿಎಸ್‌ ನ ಪದ್ಮಾವತಿ ನರಸಿಂಹ ಮೂರ್ತಿ ಆಯ್ಕೆಯಾಗಿದ್ದಾರೆ. ಆದರೆ, ಮೇಯರ್, ಉಪ ಮೇಯರ್ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯವರು ಚುನಾವಣೆ ಬಹಿಷ್ಕರಿಸಿ ಹೊರನಡೆದಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಬೋಗಸ್ ಮತದಾರರಿದ್ದಾರೆ ಅನ್ನುವುದು ಬಿಜೆಪಿಯವರ ಆರೋಪವಾಗಿತ್ತು. ಆದರೆ, ಬಿಜೆಪಿಯವರಿಗೆ ತಾವು ಗೆಲ್ಲುವ ಸಾಧ್ಯತೆ ಇಲ್ಲ ಅನ್ನುವುದು ಚೆನ್ನಾಗಿ ಗೊತ್ತಿತ್ತು, ಆ ಕಾರಣದಿಂದಲೇ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೊರನಡೆದಿದ್ದಾರೆ ಅನ್ನುವುದು ವಿಶ್ಲೇಷಕರ ಮಾತು. ಒಂದು ವೇಳೆ ಮೇಯರ್-ಉಪಮೇಯರ್ ಚುನಾವಣೆ ಬಗ್ಗೆ ಬಿಜೆಪಿಯವರು ಗಂಭೀರವಾಗಿದ್ದರೆ, ಅದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸುತ್ತಿದ್ದರು ಮತ್ತು ತಮ್ಮ ಪಕ್ಷದ ಬೆಂಗಳೂರಿನ ಸಂಸದರು ಮತ್ತು ರಾಜ್ಯಸಭಾ ಸದಸ್ಯರನ್ನೂ ಹಾಜರಿರುವಂತೆ ನೋಡಿಕೊಳ್ಳುತ್ತಿದ್ದರು. ಹೀಗೆಲ್ಲಾ ಮಾಡದೆ, ಕೇವಲ ಕಾಂಗ್ರೆಸ್‌ ಪಕ್ಷದ ವಿರುದ್ಧ ಆರೋಪ ಹೊರಿಸಿ, ಚುನಾವಣೆ ಬಹಿಷ್ಕರಿಸಿದ್ದು ಬಿಜೆಪಿಯವರ ಬೂಟಾಟಿಕೆಗೆ ಸಾಕ್ಷಿ ಎನ್ನಲಾಗಿದೆ. ಆದರೆ, ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ವಿಶೇಷ ಪ್ರಯತ್ನ ಮಾಡಿ ಸ್ಪರ್ಧಿಸುವ ಬಗ್ಗೆ ನಮಗೆ ಆಸಕ್ತಿಯಿಲ್ಲ ಅನ್ನುವುದನ್ನು, ರಾಜ್ಯ ಬಿಜೆಪಿ ಘಟಕದವರು ತಮ್ಮ ಹೈ ಕಮಾಂಡ್‌ ಗೆ ಈ ಮೊದಲೇ ಸ್ಪಷ್ಟಪಡಿಸಿದ್ದರು ಅನ್ನುವ ವಿಚಾರ ಸುದ್ದಿ ಮೂಲಗಳಿಂದ ಸೂಪರ್ ಸುದ್ದಿಗೆ ತಿಳಿದುಬಂದಿದೆ.  

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ