ಸಿಎಂ ಮಹಾ ಸುಳ್ಳುಗಾರ !

Kannada News

28-09-2017

ಬೆಂಗಳೂರು: ಈ ಹಿಂದೆ ವೀರಪ್ಪ ಮೊಯ್ಲಿ ಅವರನ್ನು ಸುಳ್ಳುಗಾರ ಮುಖ್ಯಮಂತ್ರಿ ಎನ್ನುತ್ತಿದ್ದರು. ಆದರೆ ಈಗ ಸಿದ್ದರಾಮಯ್ಯ ಮೊಯ್ಲಿ ಅವರನ್ನು ಮೀರಿಸಿ ಮಹಾ ಸುಳ್ಳುಗಾರ ಮುಖ್ಯಮಂತ್ರಿ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ ನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಯೋಜನೆ ಕಾಮಗಾರಿಗೆ 54,000 ಕೋಟಿ ಖರ್ಚು ಮಾಡುತ್ತೇವೆ ಎಂದು ಪ್ರಕಟಿಸಿರುವುದು ಮತ್ತೊಂದು ಹಸಿ ಸುಳ್ಳಾಗಿದ್ದು, ಕೇವಲ ಚುನಾವಣೆ ಗಿಮಿಕ್ ಮಾತ್ರ ಎಂದು ಟೀಕಿಸಿದರು.

ಇನ್ನು ಗೋವಾದ ಬೈನಾ ಬೀಚ್‌ ನಲ್ಲಿ ಕನ್ನಡಿಗರ ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ಖಂಡಿಸುತ್ತೇವೆ. ಈ ಬಗ್ಗೆ ನಾನು ಗೋವಾ ಸಿಎಂಗೆ ಪತ್ರ ಬರೆಯುತ್ತೇನೆ. ಗೋವಾ ಸರ್ಕಾರ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಸೂಕ್ತ ಪುನರ್ವಸತಿ ಕೈಗೊಂಡು ನಂತರ ಡೆಮಾಲಿಶ್ ಮಾಡಲಿ. ನಾನು ವೈಯಕ್ತಿಕವಾಗಿ ಪರಿಕ್ಕರ್ ಅವರನ್ನು ಭೇಟಿ ಮಾಡುವಾಗಲೂ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.

ಮಹದಾಯಿ ವಿವಾದ ಸಂಬಂಧ ಪರಿಕ್ಕರ್ ಭೇಟಿಗೆ ಇನ್ನೂ ದಿನಾಂಕ ನಿಗದಿ ಆಗಿಲ್ಲ. ಮೊನ್ನೆ ದೆಹಲಿಗೆ ಹೋದಾಗ ಗೋವಾ ಸಿಎಂ ಜೊತೆ ಭೇಟಿ ಮಾತಾಡುವ ಯಾವುದೇ ಕಾರ್ಯಕ್ರಮ ನಿಗದಿ ಆಗಿರಲಿಲ್ಲ. ದಿನಾಂಕ ನಿಗದಿಯಾದ ಬಳಿಕ ಭೇಟಿ ಮಾಡಿ ಚರ್ಚೆ ನಡೆಸಲಾಗುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಸಿಎಂ ಮಹಾ ಸುಳ್ಳುಗಾರ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ