ಟ್ರಾಫಿಕ್ ತಡೆಗೆ: ಪ್ರಯಾಣಿಕರ ಡಿವೈಡ್ !

Kannada News

28-09-2017

ಬೆಂಗಳೂರು: ನಾಲ್ಕು ದಿನಗಳ‌ ಕಾಲ ಸಾಲು ಸಾಲು ರಜೆ ಹಾಗೂ ಹಬ್ಬ ಇರುವುದರಿಂದ ಇಂದಿನಿಂದ ನಗರದಲ್ಲಿ ಸಂಚಾರ ದಟ್ಟಣೆಉಂಟಾಗಲಿದ್ದು, ಈ ಸಂಚಾರ ದಟ್ಟಣೆ ತಡೆಯಲು ಪೊಲೀಸರು ಪ್ರಯಾಣಿಕರನ್ನು ಡಿವೈಡ್ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಮೈಸೂರು, ಕೊಡಗು ಕಡೆ ತೆರಳುವ ಪ್ರಯಾಣಿಕರು ಮೈಸೂರು ರಸ್ತೆಯ ಸೆಟಲೈಟ್‌ ಗೆ ಹೋಗಬೇಕು. ಶಿವಮೊಗ್ಗದ ಕಡೆ ಹೋಗುವ ಪ್ರಯಾಣಿಕರು ಯಶವಂತಪುರ ಟಿಟಿಎಂಸಿಗೆ ತೆರಳಬೇಕು. ತಮಿಳುನಾಡಿನ ಕಡೆ ಸಂಚರಿಸುವ ಪ್ರಯಾಣಿಕರು, ಮೈಸೂರು ರೋಡ್ ಸೆಟಲೈಟ್ ಮತ್ತು ಶಾಂತಿನಗರ ಸೆಟಲೈಟ್ ಬಳಿ ಬಸ್ ಬಸ್‌ ಏರಬೇಕು. ಇನ್ನು, ದಾವಣಗೆರೆ ಕಡೆ ಹೋಗುವವರು ಚಿಕ್ಕ ಲಾಲ್‌ ಬಾಗ್ ಟರ್ಮಿನಲ್‌ ನಲ್ಲಿ ಬಸ್ ಹತ್ತುವಂತೆ ಸೂಚಿಸಿದೆ.

ಇದಲ್ಲದೇ ಇಂದು ಧನ್ವಂತ್ರಿ ರೋಡ್, ರೈಲ್ವೆ ಸ್ಟೇಷನ್ ರೋಡ್, ಟ್ಯಾಂಕ್ ಬಕಲ್ ರೋಡ್ ಮತ್ತು ಖೋಡೇಸ್ ಜಂಕ್ಷನ್‌ ನಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೇ, ಸಾರ್ವಜನಿಕರು ಕೆಜಿ ರೋಡ್, ಗೂಡ್ ಶೆಡ್ ರೋಡ್, ಶೇಷಾದ್ರಿ ರೋಡ್ ಮತ್ತು ಸುಬೇದಾರ್ ಛತ್ರ ರೋಡ್‌ ಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ‌ ಮನವಿ ಮಾಡಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ