ಹುಟ್ಟು ಹಬ್ಬದಂದೇ ವಿಷ ಸೇವಿಸಿದ ಬಾಲಕರು

Kannada News

28-09-2017

ಬೆಂಗಳೂರು: ಹುಟ್ಟು ಹಬ್ಬದ ಆಚರಣೆಯ ವೇಳೆ ಬಾಲಕರಿಬ್ಬರು ತಂಪು ಪಾನೀಯ ಎಂದು ವಿಷ ಸೇವಿಸಿ ಸಾವಿಗೀಡಾದ ಘಟನೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಒಂಬತ್ತು ವರ್ಷದ ಆರ್ಯನ್ ಸಿಂಗ್ ಹಾಗೂ ಒಂಬತ್ತು ವರ್ಷದ ಸಾಹಿಲ್ ಸಾವಿಗೀಡಾದ ಬಾಲಕರು. ಸಂಜಯ್ ಸಿಂಗ್ ಹಾಗೂ ಅಂಜು ದಂಪತಿಗಳ ಪುತ್ರ ಆರ್ಯನ್ ಸಿಂಗ್ ಹುಟ್ಟುಹಬ್ಬವಿತ್ತು. ಶಂಕರ್ ಎಂಬುವರ ಮಗ ಸಾಹಿಲ್​ ನ ಹುಟ್ಟುಹಬ್ಬದ ಆಚರಣೆಗೆ ಬಂದಿದ್ದನು.

ಈ ವೇಳೆ ಆರ್ಯನ್ ತಂಪು ಪಾನೀಯ ಇರುವ ವಿಷಕಾರಿ ವಸ್ತುವನ್ನು ತಂದು ಸಾಹಿಲ್​ ನ ಜೊತೆ ನಿನ್ನೆ ತಡರಾತ್ರಿ ಸೇವಿಸಿದ್ದಾನೆ. ಈ ವೇಳೆ ವಿಷಕಾರಿ ಪದಾರ್ಥ ಇಬ್ಬರು ಬಾಲಕರ ದೇಹ ಸೇರಿ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ರು. ಮಕ್ಕಳು ಅಸ್ವಸ್ಥರಾಗುತ್ತಿದ್ದಂತೆ ಹೆದರಿದ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಸಾವಿಗೀಡಾಗಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ