ದ್ವೀಪದಂತಾದ ಬೆಂಗಳೂರು

Kannada News

28-09-2017

ಬೆಂಗಳೂರು: ಆಯುಧ ಪೂಜೆ ಹಾಗೂ ದಸರಾ ಹಬ್ಬದ ಸಂಭ್ರಮದಲ್ಲಿದ್ದ ಬೆಂಗಳೂರಿಗರು ಮಳೆ ಆರ್ಭಟಕ್ಕೆ ತತ್ತರಿಸುವಂತಾಗಿದೆ. ಕೆ.ಆರ್. ಪುರ, ಕೋರಮಂಗಲ, ಚಂದ್ರಾ ಲೇಔಟ್, ಶಾಂತಿನಗರ ಸೇರಿ ಹಲವು ಬಡಾವಣೆಗಳು ಜಲಾವೃತವಾಗಿವೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ಸುರಿದ ಭಾರಿ ಮಳೆಗೆ ನಗರದ ಹಲವು ಬಡಾವಣೆಗಳು ಜಲಾವೃತ ವಾಗಿದ್ದು, ದ್ವೀಪವಾಗಿ ಮಾರ್ಪಟ್ಟಿವೆ.

ಕೆ.ಆರ್. ಪುರದ ನೇತ್ರಾವತಿ ಬಡಾವಣೆ, ಗಾಯತ್ರಿ ಬಡಾವಣೆ, ಚಿಕ್ಕದೇವಸಂದ್ರ, ಸ್ವತಂತ್ರನಗರ, ಮಹದೇವಪುರದ ದೊಡ್ಡನೆಕ್ಕುಂದಿ, ಮಾರತ್ ​ಹಳ್ಳಿ, ವೈಟ್ ​ಫೀಲ್ಡ್, ವರ್ತರು ಕೋಡಿ ಸುತ್ತಲಿನ ಪ್ರದೇಶಗಳು, ಆಡುಗೋಡಿ, ಯಶವಂತಪುರ, ಭಟ್ಟರಹಳ್ಳಿ ಸೇರಿ ಇನ್ನಿತರ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈ ಭಾಗಗಳಲ್ಲಿ ರಾಜಕಾಲುವೆ ದುರಸ್ತಿ ಕಾಮಗಾರಿ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ನೀರು ರಸ್ತೆಗೆ ಹರಿದು, ಮನೆಗಳಿಗೆ ನುಗ್ಗಿದೆ. ಮಳೆಯಿಂದಾಗಿ ಹಲವು ಕೆರೆಗಳ ಕೋಡಿ ಒಡೆದಿದ್ದು, ಜನರು ತತ್ತರಿಸುವಂತಾಗಿದೆ. ದೊಡ್ಡಬಿದರಕಲ್ಲು, ದೊಡ್ಡನೆಕ್ಕುಂದಿ, ಸೀಗೆಹಳ್ಳಿ ಕೆರೆಗಳು ಭರ್ತಿಯಾಗಿದ್ದು ಭಾರಿ ಪ್ರಮಾಣದಲ್ಲಿ ನೀರು ಹೊರ ಹರಿಯುತ್ತಿದೆ.

ಆರ್​.ಎಂ.ಎಸ್ ಬಡಾವಣೆ ಸಮೀಪದ ಐಟಿಸಿ ಕಾಲನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ನಿಂದ ಬೆಂಕಿ ಹೊತ್ತಿಕೊಂಡು ಟಿ.ವಿ ಸೇರಿ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಒಟ್ಟಾರೆ ಈ ಬಾರಿ ಮಳೆ ಜನರನ್ನು ಬೆಚ್ಚಿಬೀಳಿಸಿದ್ದಂತು ಸುಳ್ಳಲ್ಲ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ