ಕಪ್ಪಗಿರುವವರನ್ನು ಬಿಳಿ ಮಾಡ್ತಾರೆ…!

Kannada News

28-09-2017

ಸಾಮಾನ್ಯವಾಗಿ ಯಾವುದೇ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮೇಕಪ್ ಮಾಡುವುದು ಸಹಜ. ಮೇಕ್ ಅಪ್ ಅನ್ನುವುದು ಚೆನ್ನಾಗಿದ್ದವರನ್ನು ಇನ್ನೂ ಹೆಚ್ಚು ಚೆನ್ನಾಗಿಕಾಣುವಂತೆ ಮಾಡಿದರೆ, ಹೇಗೆಲ್ಲಾ ಇದ್ದವರನ್ನೂ ಒಂದಿಷ್ಟು ನೋಡುವಷ್ಟರ ಮಟ್ಟಿಗೆ ಮಾಡುವುದಂತೂ ಸತ್ಯ. ಆದರೆ, ಕೆಲವು ಟಿವಿ ಧಾರಾವಾಹಿಗಳಲ್ಲಿನ ಪ್ರಮುಖ ಪಾತ್ರಗಳನ್ನು ಶ್ರೀಮಂತಗೊಳಿಸುವ ಸಲುವಾಗಿ, ಹೆಚ್ಚು ಆಕರ್ಷವಾಗಿ ಕಾಣುವಂತೆ ಮಾಡುವುದಕ್ಕಾಗಿ ಮತ್ತು ಗೌರವರ್ಣವೇ ವ್ಯಕ್ತಿಗೆ ಗೌರವ ತಂದುಕೊಡುವ ಅಂಶ ಎಂಬ ರೀತಿಯಲ್ಲಿ ಕಪ್ಪಗಿದ್ದವರಿಗೂ ಕೆಜಿಗಟ್ಟಲೆ ಮೇಕಪ್ ಹಚ್ಚುತ್ತಾರೆ. ಕಿನ್ನರಿ, ಕುಲವಧು, ಅಮೃತ ವರ್ಷಿಣಿ ಇತ್ಯಾದಿ ಧಾರಾವಾಹಿಗಳ ಪ್ರಮುಖ ಪಾತ್ರಧಾರಿಗಳಲ್ಲಿ ಕೆಲವರು ಕಪ್ಪಾಗಿದ್ದರೂ ಕೂಡ ಅವರನ್ನು ಭಾರೀ ಬೆಳ್ಳಗೆ ಕಾಣುವಂತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಏನೆಲ್ಲಾ ಮೇಕಪ್ ಮಾಡಿದರೂ ಕೂಡ ಕೆಲವೊಮ್ಮೆ ಕಲಾವಿದರ ಮೂಲ ಬಣ್ಣ ಇಣುಕಿ, ಒಂದಿಷ್ಟು ಅಭಾಸಕ್ಕೂ ಕಾರಣವಾಗುತ್ತದೆ. ಆದರೆ, ಬೆಳ್ಳಗೆ ಕಾಣುವುದೇ ಹಿರಿಮೆ, ಜನಪ್ರಿಯತೆ, ಗೌರವ, ಶ್ರೀಮಂತಿಕೆ, ಮೇಲ್ವರ್ಗದ ಸಂಕೇತ ಅನ್ನುವಂಥ ಚಿಂತನೆಗಳು ನಮ್ಮ ಸಮಾಜದಲ್ಲಿ ಮನೆಮಾಡಿವೆ. ಇದೇ ವೇಳೆ, ಕಪ್ಪು ಬಣ್ಣ ಹೊಂದಿರುವುದು ಕೆಳವರ್ಗ, ಬಡತನ, ವೈಫಲ್ಯ ಇತ್ಯಾದಿಗಳ ಸಂಕೇತ ಅನ್ನುವಂತೆಯೂ ಬಿಂಬಿಸಲಾಗುತ್ತದೆ. ಆದರೆ, ಈ ರೀತಿಯ ಚಿಂತನೆಗಳು ಅಮಾನವೀಯ ಮತ್ತು ತಾರತಮ್ಯದ ಚಿಂತನೆಗಳಾಗಿದ್ದು, ಸಮಾಜದ ಆರೋಗ್ಯಕ್ಕೆ ಹಾನಿಕರ ಅನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.


ಸಂಬಂಧಿತ ಟ್ಯಾಗ್ಗಳು

ಮೇಕಪ್ ಮರ್ಮ…! ಮೇಕಪ್ ಮರ್ಮ…!


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ