ಟಾಯ್ಲೆಟ್ನಲ್ಲಿ ಕಾಗೋಡು ತಿಮ್ಮಪ್ಪರ ಕರಪತ್ರ !

Kannada News

27-09-2017

ಬೆಂಗಳೂರು: ರಾಜ್ಯ ಸರ್ಕಾರದ ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರನ್ನು ಅವಹೇಳನ ಮಾಡುವಂತಹ ಘಟನೆಯೊಂದು ವಿಧಾನಸೌಧದಲ್ಲಿ ನಡೆದಿದೆ. ವಿಧಾನಸೌಧದ ಮೂರನೆ ಮಹಡಿಯ 332ರ ಕೊಠಡಿ ಸಂಖ್ಯೆಯಲ್ಲಿರುವ ಪುರುಷರ ಶೌಚಾಲಯದಲ್ಲಿ ಕರಪತ್ರಗಳು ಪತ್ತೆಯಾಗಿವೆ. ಮೂತ್ರಾಲಯದ ಕಮೋಡ್‍ ನಲ್ಲಿ ಕಾಗೋಡು ತಿಮ್ಮಪ್ಪ ಅವರ ಭಾವಚಿತ್ರ ಹಾಕಲಾಗಿದ್ದು, ಮೇಲೆ ಬ್ರಾಹ್ಮಣರನ್ನು ಕೆಳಭಾಗದಲ್ಲಿ ನಿಂದಿಸಿದ್ದಕ್ಕೆ ಎಂಬ ವಾಕ್ಯಗಳನ್ನು ಮುದ್ರಿಸಲಾಗಿದೆ. ವಿಧಾನಸೌಧದ ಶೌಚಾಲಯದಲ್ಲಿ ಈ ಕರಪತ್ರ ಕಂಡು ಬಂದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ