ಪ್ರೇಯಸಿ ನಗ್ನ ಫೋಟೋ ಹರಿಬಿಟ್ಟು ವಿಕೃತಿ !

Kannada News

27-09-2017

ಬೆಂಗಳೂರು: ಪ್ರೇಯಸಿ ತನ್ನ ಜೊತೆ ಸಂಪರ್ಕ ಕಡಿತ ಮಾಡಿಕೊಂಡ ಕಾರಣಕ್ಕೆ ಆಕೆಯ ನಗ್ನ ಫೋಟೋಗಳನ್ನು ಇನ್ ಸ್ಟಾಗ್ರಾಮ್ ಜಾಲತಾಣಕ್ಕೆ ಹರಿಬಿಟ್ಟು ಯುವಕನೊಬ್ಬ ಹೀನ ಕೃತ್ಯವೆಸಗಿದ್ದಾನೆ.

ಕೃತ್ಯ ವೆಸಗಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ದ್ವಿತಿಯ ವರ್ಷದ ಬಿಬಿಎಂ ವಿದ್ಯಾರ್ಥಿ ಶೋವಿಕ್ ಭುವನ್ (22)ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತನ್ನ ಮಾಜಿ ಪ್ರೇಯಸಿಯ ಮೇಲಿನ ದ್ವೇಷದಿಂದ ಆಕೆಯ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

ಅಸ್ಸಾಂ ಮೂಲದ ಯುವತಿಯು ಕಳೆದ ವರ್ಷ ನಗರದಲ್ಲಿ ನೆಲೆಸಿದ್ದಾಗ ಪರಿಚಯ ಮಾಡಿಕೊಂಡಿದ್ದ ಭುವನ್ ಆಕೆಯ ಫೋಟೋಗಳನ್ನು ತೆಗೆದುಕೊಂಡಿದ್ದ. ನಂತರ ಯುವತಿ ಮುಂಬೈಗೆ ವಾಪಸ್ಸಗಿದ್ದಳು. ಫೋಟೋಗಳನ್ನು ಪೋಸ್ಟ್ ಮಾಡುವ ಮೊದಲು ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ್ದ ಭುವನ್ ತನ್ನ ಜೊತೆಗಿನ ಸಂಬಂಧವನ್ನು ಮುಂದುವರೆಸುವಂತೆ ಬೇಡಿಕೆ ಇಟ್ಟಿದ್ದ.

ಯುವತಿ ಅದನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಆಕೆಯ ಫೋನ್ ನಂಬರ್ ಜೊತೆ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಅಲ್ಲದೆ ಈಕೆ ವೇಶ್ಯೆಯಾಗಿದ್ದು ಯಾರು ಬೇಕಾದರು ಸಂಪರ್ಕಿಸಬಹುದು ಎಂದು ಪೋಸ್ಟ್ ಮಾಡಿದ್ದ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯು ಯುವಕನ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು. ಯುವತಿಗೆ ಆಕೆಯ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಟೋ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಆಕೆಯ ಮೊಬೈಲ್ ಸಂಖ್ಯೆಗೆ ಹಲವರಿಂದ ಫೋನ್ ಕರೆಗಳು ಬಂದಿವೆ. ಭುವನ್ ಸುಮಾರು 20ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದು. ಆಕೆಯ ಮೊಬೈಲ್ ಸಂಖ್ಯೆಯನ್ನು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಬೈ ವಲಯ 10ರ ಪೊಲೀಸ್ ಆಯುಕ್ತ ನವಿಚಂದ್ರ ರೆಡ್ಡಿ, ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಶೈಲೇಸ್ ಪಸಾಲ್ವರ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದರು. ಅದರಂತೆ ಯುವತಿಯನ್ನು ಭೇಟಿ ಮಾಡಲು ಮುಂಬೈಗೆ ಬಂದ ಆರೋಪಿ ಭುವನ್‍ ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಸಂತ್ರಸ್ತೆಯ ನಗ್ನ ಫೋಟೋಗಳ ಮೂಲಕ ಆಕೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನ ಬೇಡಿಕೆಗೆ ಬದ್ದರಾಗಿರುವಂತೆ ತಿಳಿಸಿದ್ದ. ಯುವ ಜನಾಂಗ ಇಂತಹ ಘಟನೆಗಳಿಂದ ಎಚ್ಚೆತ್ತುಕೊಂಡು ಜಾಗೃತರಾಗಿರಬೇಕು. ತಮ್ಮ ಘನತೆಗೆ ದಕ್ಕೆ ತರುವಂತಹ ಯಾವುದೇ ಭಾವಚಿತ್ರಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬಾರದು ಎಂದು ಪಸಾಲ್ವರ್ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ