ಕಾರಲ್ಲಿದ್ದರು 10 ಮಂದಿ ದರೋಡೆಕೋರರು !

Kannada News

27-09-2017

ಬೆಂಗಳೂರು: ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 7ರ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇನ್ನೋವಾ ಕಾರೊಂದನ್ನ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು 6 ಮಂದಿ ದರೋಡೆಕೋರರನ್ನು ಬಂಧಿಸಿದ್ದಾರೆ.

ಹೆದ್ದಾರಿ ಬಳಿ ಅನುಮಾನಾಸ್ಪದವಾಗಿ ಈ ಕಾರು ತಿರುಗಾಡುತ್ತಿತ್ತು. ಹೈವೇ ಗಸ್ತು ವಾಹನವನ್ನ ಕಂಡ ಶಂಕಿತರು ಕಾರನ್ನು ಅತಿವೇಗದಲ್ಲಿ ಓಡಿಸಿದ್ದಾರೆ. ಈ ಸೂಕ್ಷ್ಮತೆ ಅರಿತ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿದ್ದಾರೆ. ಯಾವಾಗ ಪೊಲೀಸರು ಚೇಸ್ ಮಾಡಿ ಕಾರನ್ನು ಅಡ್ಡಗಟ್ಟಿದರೋ ಕಾರಿನಲ್ಲಿ 10 ಮಂದಿ ಯುವಕರಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಇನ್ನುಳಿದ 6 ಜನ ಯುವಕರನ್ನ ದರೋಡೆಕೋರರೆಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಜೊತೆಗೆ ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಕಳೆದ 10 ದಿನಗಳಲ್ಲಿ ರಾಷ್ಟ್ರಿಯ ಹೆದ್ದಾರಿಯಲ್ಲಿ ನಡೆದ 5 ದರೋಡೆ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಕಾರಿನ ನಂಬರ್ ಕೂಡ ನಕಲಿಯಾಗಿದ್ದು, ಪೊಲೀಸರಿಗೆ ಇನ್ನಷ್ಟು ಅನುಮಾನಗಳು ಮೂಡಿವೆ. ಹಾಗಾಗಿ ಕಾರು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ