ಕೆರೆಗೆ ಬಿದ್ದ ಕಾರು: ಐವರು ಜಲಸಮಾಧಿ !

Kannada News

27-09-2017

ಹಾಸನ: ಕೆರೆಗೆ ಕಾರು ಉರುಳಿ ಬಿದ್ದು, ಐವರು ಜಲ ಸಮಾಧಿಯಾದ ದಾರುಣ ಘಟನೆಯು ಹಾಸನದಲ್ಲಿ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಬಳಿ ಈ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಮೂವರು ಪುರಷರು ಸಾವನ್ನಪ್ಪಿದ್ದಾರೆ.

ಹೊಳೆನರಸೀಪುರ ತಟ್ಟೆಕೆರೆಯ ಅನಿಲ್ (22) ಮತ್ತು ಶಿವಮೊಗ್ಗ ಮೂಲದ ಉಮೇಶ್ ಮೃತರು. ಅನಿಲ್ ಮತ್ತು ಉಮೇಶ್ ಅವರ ಮೃತದೇಹಗಳನ್ನು ಮೇಲೆತ್ತಲಾಗಿದೆ. ಉಳಿದ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ