ಕೋಲಾರಕ್ಕೆ ಸಂತಸದ ಮಳೆ !

Kannada News

27-09-2017

ಕೋಲಾರ: ನೀರಿಗಾಗಿ ತತ್ತರಿಸಿಹೋಗಿದ್ದ, ಕೋಲಾರ ಜಿಲ್ಲೆಯಲ್ಲಿ ಸಂತಸ ಮನೆಮಾಡಿದೆ. ಜಿಲ್ಲೆಯ ಕೆರೆಗಳಲ್ಲಿ ಅಷ್ಟು ನೀರನ್ನು ಕಂಡು ಹತ್ತಾರು ವರ್ಷಗಳೇ ಕಳೆದಿತ್ತು. ಆದರೆ ಒಂದೇ ಒಂದು ಮಾಯದಂತ ಮಳೆಯ ಅಬ್ಬರಕ್ಕೆ ಆಟದ ಮೈದಾನದಂತಾಗಿದ್ದ ಕೆರೆಗಳೆಲ್ಲ ಮೈದುಂಬಿ ಕಂಗೊಳಿಸುತ್ತಿವೆ.

ಜಿಲ್ಲೆಯ ಬಂಗಾರಪೇಟೆ, ಬೂದಿಕೋಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾಗಿದೆ. ಪರಿಣಾಮ ಬೂದಿಕೋಟೆ ಹೋಬಳಿಯ ಬಹುತೇಕ ಕೆರೆಗಳಲ್ಲಿ ನೀರು ತುಂಬಿದೆ. ಬರಗಾಲದಿಂದ ತತ್ತರಿಸಿ ಹೋಗಿದ್ದ ಕೋಲಾರ ಜಿಲ್ಲೆಯ ಬಂಗಾರಪೇಟೆ ಭಾಗಗಳಲ್ಲಿ ನಿಜಕ್ಕೂ ಇಂತಹದೊಂದು ಮಳೆಯನ್ನು ಕಂಡು ಕನಿಷ್ಠ 15 ವರ್ಷಗಳೇ ಕಳೆದಿತ್ತು. ಸದಾ ಬಿರುಬಿಸಿಲಿನಿಂದ ಬೇಯುತ್ತಿದ್ದ ಈ ಭಾಗದಲ್ಲಿ ಮಳೆ ಮರಿಚಿಕೆಯಾಗಿತ್ತು. ಆದರೆ ಇದ್ದಕ್ಕಿದಂತೆ ಸುರಿದ ಧಾರಾಕಾರ ಮಳೆಗೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿ ಮಾರ್ಕಂಡೇಯ ಜಲಾಶಯ 50ರಷ್ಟು ತುಂಬಿದೆ. ತಾಲ್ಲೂಕಿನ ಹುಕ್ಕುಂದ, ಸಂಗನಹಳ್ಳಿ, ಸಾಗರಹಳ್ಳಿ ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ಕೆರೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಒಟ್ಟಾರೆ ಧಾರಾಕಾರ ಮಳೆಯಿಂದ, ಕೋಲಾರ ರೈತರಲ್ಲಿ, ಜನತೆಯಲ್ಲಿ ಮಂದಹಾಸ ಮೂಡಿಸಿದೆ.


ಸಂಬಂಧಿತ ಟ್ಯಾಗ್ಗಳು

ಕೋಲಾರ ಮಳೆ ತಂದ ಸಂತಸ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ