ಮಳೆ ನಡುವೆಯೇ ಸೈಕ್ಲೋಥಾನ್ !

Kannada News

27-09-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸ್ಥಿರತೆ ಸೌಹಾರ್ದತೆ ದೃಷ್ಟಿಯಿಂದ ದಸರಾ ಕ್ರೀಡಾ ಉಪಸಮಿತಿಯಿಂದ, ಸೈಕ್ಲೋಥಾನ್ ಸ್ಪರ್ಧೆಯನ್ನು ಆಯೋಜಿಸಿದೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಐಜಿಪಿ, ವಿಪುಲ್ ಕುಮಾರ್ ಸೈಕ್ಲಾಥಾನ್ ಗೆ ಚಾಲನೆ ನೀಡಿದರು. ವಿವಿಧ ಜಿಲ್ಲೆಗಳಿಂದ ಸುಮಾರು 350 ಕ್ಕೂಹೆಚ್ಚು ಸ್ಪರ್ಧಿಗಳು  ಭಾಗಿಯಾಗಿದ್ದರು. ಪುರುಷರಿಗೆ 100 ಕಿ.ಮೀ ಹಾಗೂ ಮಹಿಳೆಯರಿಗೆ 50 ಕಿ.ಮೀ ಎಂದು ನಿಗದಿಪಡಿಸಲಾಗಿತ್ತು. ಚಾಮುಂಡಿ ವಿಹಾರ ಕ್ರೀಡಾಂಗಣ ಬಳಿ ಆಯೋಜಿಸಲಾದ ಈ ಬಾರಿಯ ಸೈಕ್ಲೋಥಾನ್ ನಲ್ಲಿ ಪೊಲೀಸ್ ಇಲಾಖೆಯು ಪಾಲ್ಗೊಂಡಿದೆ. ಸೈಕ್ಲೋಥಾನ್ ಸ್ಪರ್ಧೆಯಲ್ಲಿ ವಿದೇಶಿಯರು ಕೂಡ ಭಾಗವಹಿಸಿದ್ದರು. ಇಂದು ಬೆಳಿಗ್ಗೆ ತುಂತುರು ಮಳೆ ಸುರಿಯುತ್ತಿತ್ತು. ತುಂತುರು ಮಳೆಯ ನಡುವೆಯೂ ಸೈಕ್ಲೋಥಾನ್ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ಮಳೆ ನಡುವೆಯೆ ಸೈಕ್ಲೋಥಾನ್ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ