ಜನರ ನಿದ್ದೆಗೆಡಿಸಿದ ಮಳೆ !

Kannada News

27-09-2017

ಬೆಂಗಳೂರು: ಒಂದು ದಿನದ ಬಿಡುವಿನ ನಂತರ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದೆ. ನಗರದ ಬಹುತೇಕ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಕಾರ್ಪೋರೇಷನ್, ಮೆಜೆಸ್ಟಿಕ್, ಲಾಲ್‌ ಬಾಗ್, ಹೊಸೂರು ರಸ್ತೆ , ಎಲೆಕ್ಟ್ರಾನಿಕ್ ಸಿಟಿ, ಮಲ್ಲೇಶ್ವರಂ, ಯಶವಂತಪುರ, ಮತ್ತಿಕೆರೆ, ಜಾಲಹಳ್ಳಿ, ಮಲ್ಲೇಶ್ವರಂ, ಹೆಬ್ಬಾಳ, ಯಲಹಂಕ, ರಾಜಾಜಿನಗರ, ಶೇಷಾದ್ರಿಪುರಂ, ರಾಜರಾಜೇಶ್ವರಿ ನಗರ, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಮಳೆ ಸುರಿದಿದೆ.

ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಹಳ್ಳಗಳಂತಾಗಿದ್ದು ಚಂದ್ರಾ ಲೇಔಟ್, ಕೋರಮಂಗಲ, ನಾಯಂಡನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕೆ.ಆರ್.ಪುರಂನ ಭೀಮಯ್ಯ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ.

ಜೆ.ಪಿ.ನಗರದಲ್ಲಿ ಭಾರೀ ಮಳೆಯಿಂದಅಗಿ ಶೋಭಾ ಡಿಪ್ಲೋರ್ ಗೋಡೆ ಕುಸಿದಿದೆ. ಗೋಡೆ ಅಪಾರ್ಟ್ಮೆಂಟ್ ಪಕ್ಕದಲ್ಲಿದ್ದ ಎರಡು ಮನೆಗಳ ಮೇಲೆ ಕುಸಿದಿದೆ. ಮನೆಗಳ ಬಾಗಿಲ ಮೇಲೆ ಗೋಡೆ ಕುಸಿದಿರುವ ಹಿನ್ನೆಲೆಯಲ್ಲಿ ಮನೆಯೊಳಗಿರುವವರು ಹೊರಗೆ ಬರಲಾಗದೆ ಪರದಾಡಿದರು.

ಚಂದ್ರ ಲೇಔಟ್ ನಲ್ಲಿ ಐಎಚ್ಎಂಸಿಟಿ ಬಾಯ್ಸ್ ಹಾಸ್ಟೆಲ್ ನ ಕಾಂಪೌಡ್ ಗೋಡೆ ಕುಸಿದು ಬಿದ್ದಿದೆ. ಸುಮಾರು 12 ಅಡಿ ಎತ್ತರ 100 ಅಡಿ ಉದ್ದದ ಗೋಡೆ ಕುಸಿದಿದೆ. ಇದರಿಂದಾಗಿ ಕಾಂಪೌಡ್ ಪಕ್ಕದಲ್ಲಿ ಪಾರ್ಕ್ ಮಾಡಿದ್ದ 6 ಕಾರು, 1 ಬೈಕ್ ಮತ್ತು 2 ಆಟೋಗಳು ಜಖಂಗೊಂಡಿವೆ. ಕಳಪೆ ಕಾಮಗಾರಿಯೇ ಗೋಡೆ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಟ್ಟಾರೆ ನಗರದ ಜನತೆಗೆ ಮಳೆ ಸಾಕಪ್ಪಾ ಸಾಕು ಎಂಬಂತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ