ನದಿಯಂತಾದ ಬಸ್ ಡಿಪೋ

Kannada News

27-09-2017

ಉತ್ತರ ಕನ್ನಡ: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ, ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯಾದ್ಯಂತ ಸುರಿದ ಗುಡುಗು ಸಹಿತ ಮಳೆಗೆ, ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತಡುಗುಣಿಯ ಹೊಳೆ ನೀರು ತೋಟಳಿಗೆ ನುಗ್ಗಿ, ಸಾಕಷ್ಟು ಹಾನಿ ಮಾಡಿದೆ. ಅಲ್ಲದೇ  ಗ್ರಾಮಸ್ಥರ ಅಡಿಕೆ ತೋಟ, ಮಳೆಯಿಂದಾಗಿ ಜಲಾವೃತಗೊಂಡಿದೆ. ಇನ್ನು ಜಿಲ್ಲೆಯ ಅರಿಶಿನಕುಂಟೆ ಡಿಪೋ 40, ನದಿಯಂತಾಗಿದ್ದು, ಬಸ್ ಡಿಪೋ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಬಸ್ ಗೆ ಅರ್ಥದಷ್ಟು ಎತ್ತರಕ್ಕೆ ನೀರು ತುಂಬಿದೆ. ಅಲ್ಲದೇ ರಸ್ತೇ ಮಧ್ಯದಲ್ಲೆ ಲಾರಿಯೊಂದು ಮಳೆ ನೀರಿಗೆ ಸಿಕ್ಕಿಕೊಂಡಿದೆ. ಒಟ್ಟಾರೆ ಶಿರಸಿಯಾದ್ಯಂತ ಮಳೆ ಅವಾಂತರವನ್ನೇ ಸೃಷ್ಟಿಸಿದೆ.   ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ