ಅನಾಮಧೇಯ ಪತ್ರ ಬಾಲಕಿ ಆತ್ಮಹತ್ಯೆ..?

Kannada News

26-09-2017

ಬೆಂಗಳೂರು: ನಗರದ ಹೊರವಲಯದ ಬನ್ನೇರುಘಟ್ಟದ ಬಿಲವರ್ದನಹಳ್ಳಿಯಲ್ಲಿ 13 ವರ್ಷದ ಬಾಲಕಿಯ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ, ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಬಿಲವರ್ದನಹಳ್ಳಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ 13 ವರ್ಷದ ಚಂದನಾ ನೇಣು ಬಿಗಿದು ಸಾವನ್ನಪ್ಪಿದ್ದಾಳೆ. ಬಾಲಕಿ ಮೃತಪಟ್ಟಿರುವ ಸ್ಥಳದಲ್ಲಿಯೇ ಬಾಲಕಿಯ ತಂದೆಗೆ ಬೆದರಿಕೆ ಹಾಕಿರುವ ರೀತಿಯ ಪತ್ರ ದೊರೆತಿರುವುದು  ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಿಸ್ಟರ್ ವಾಸುದೇವ್, ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದ್ದೇನೆ. ನಿನ್ನ ಮಗ ನನಗೆ ಸಿಕ್ಕಿದ್ದು, ಜಸ್ಟ್ ಮಿಸ್ ಆಗಿದ್ದಾನೆ, ಅವನನ್ನು ಬಿಡುವುದಿಲ್ಲ ಎಂದು ಪತ್ರದಲ್ಲಿ ಬೆದರಿಕೆ  ಹಾಕಲಾಗಿದೆ. ನಿನ್ನ ಇನ್ನಿಬ್ಬರು ಮಕ್ಕಳನ್ನೂ ನಾನು ಬಿಡಲ್ಲ ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಬರೆದಿದ್ದಾರೆ. ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ