ಕೋರ್ಟ್ ಆದೇಶ ಉಲ್ಲಂಘನೆ: ಕಟ್ಟಡ ನೆಲಸಮ !

Kannada News

26-09-2017

ಹಾಸನ: ಕೋರ್ಟ್ ಆದೇಶವನ್ನು ಧಿಕ್ಕರಿಸಿ, ಅಕ್ರಮವಾಗಿ ನಡೆಸುತ್ತಿದ್ದ, ಹೋಟೆಲ್ ಅನ್ನು ತರೆವುಗೊಳಿಲಾಗಿದೆ. ಹಾಸನ ಜಿಲ್ಲೆಯ ಕೆ.ಆರ್.ಪುರಂನಲ್ಲಿರುವ, ಐಶ್ವರ್ಯ ಹೋಟೆಲ್ ನಡೆಸುತ್ತಿದ್ದ ಬಹುಮಹಡಿ ಕಟ್ಟಡ ಇದಾಗಿದ್ದು,  2 ನೆಲಮಹಡಿಯೊಂದಿಗೆ 5 ಮೇಲಂತಸ್ತಿನ ಕಟ್ಟಡವನ್ನು ತೆರವು ಮಾಡಲಾಗಿದೆ. ಅಕ್ರಮ ಕಟ್ಟಡ ನಿರ್ಮಾಣವೆಂದು ಸುಜೀತ್ ನಾರಾಯಣ್ ಎಂಬುವರು ದೂರು ದಾಖಲಿಸಿದ್ದರು ಎನ್ನಲಾಗಿದೆ.

ಮುಂಬೈ ಮೂಲದ ಎಂ.ಎಲ್.ಬೇಲೂರಾ ಎಂಬುವರು ನಿರ್ಮಾಣ ಮಾಡಿದ್ದ ಬಹುಮಹಡಿ ಕಟ್ಟಡವಾಗಿದೆ. ಪಾರ್ಕಿಂಗ್ ವ್ಯವಸ್ಥೆ,  ರಾಜಕಾಲುವೆ ಮೇಲೆ ನಿರ್ಮಿತವಾಗಿರುವ ಕಟ್ಟಡ ತಡೆಯಾಜ್ಞೆಗೆ ಕೋರಿ ನ್ಯಾಯಾಲಯಕ್ಕೆ, ಕಟ್ಟಡ ಮಾಲೀಕ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಹಾಸನ ಜೆ.ಎಂ.ಎಫ್.ಸಿ. ನ್ಯಾಯಾಲಯ ಮನ್ನಣೆ ನೀಡಿರಲಿಲ್ಲ. ನಗರಸಭೆಗೆಯಿಂದ ನೀಡಲಾದ ಸೌಕರ್ಯಗಳ ಕಡಿತಕ್ಕೂ ಕೋರ್ಟ್‌ ಸೂಚಿಸಿತ್ತು. ತಕ್ಷಣದಿಂದ ಹೋಟೆಲ್ ಚಟುವಟಿಕೆ ನಿಲ್ಲಿಸಬೇಕೆಂದು ಕೋರ್ಟ್‌ ಆದೇಶ ಹೊರಡಿಸಿದ್ದರೂ ಕಟ್ಟಡ ಮಾಲೀಕ ಆದೇಶ ಧಿಕ್ಕರಿಸಿ ಹೋಟೆಲ್ ಚಟುವಟಿಕೆ ಮುಂದುವರೆಸಿದ್ದರು ಎನ್ನಲಾಗಿದೆ. ಆದರೆ ಇದೀಗ ಕಟ್ಟಡ ತೆರವುಗೊಳಿಸಲಾಗಿದೆ.

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ