ಅಧಿಕಾರಕ್ಕೆ ಗಂಟುಬಿದ್ದ ಅಧ್ಯಕ್ಷೆ !

Kannada News

26-09-2017 405

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೂ ಸರಿಯಾಗಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಕಾಂಗ್ರೆಸ್ ನ ಜಿಲ್ಲಾ ಪಂಚಾಯಿತಿ ಸದಸ್ಯರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು. ಅಧಿಕಾರಕ್ಕಾಗಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಗದ್ದುಗೆ ಹಿಡಿದಿರುವ ಕಾಂಗ್ರೆಸ್, 5 ವರ್ಷದ ಅವಧಿಯಲ್ಲಿ ತಲಾ 15 ತಿಂಗಳಿನಂತೆ ನಾಲ್ವರು ಮಹಿಳೆಯರಿಗೆ ಅಧ್ಯಕ್ಷಗಿರಿ ಸ್ಥಾನ ಹಂಚಲು ಒಡಂಬಡಿಕೆ ಮಾಡಿಕೊಂಡಿತ್ತು. ಅದರಂತೆ ಮೊದಲ 15 ತಿಂಗಳ ಅವಧಿಯನ್ನು ಸೌಭಾಗ್ಯ ಬಸವರಾಜನ್ ಅವರು ಪೂರೈಸಿದ್ರು. ಆದರೆ ಇದೀಗ 17 ತಿಂಗಳಾದ್ರೂ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಒಪ್ಪುತ್ತಿಲ್ಲ.

ಸೌಭಾಗ್ಯ ಬಸವರಾಜನ್ ಅಧಿಕಾರಕ್ಕೆ ಅಂಟಿಕೊಂಡಿರುವುದು ಅಧ್ಯಕ್ಷ ಸ್ಥಾನದ ಇತರ ಆಕಾಂಕ್ಷಿಗಳಿಗೆ ನುಂಗಲಾರದ ತುತ್ತಾಗಿದೆ. ಅಧಿಕಾರಿ ಬಿಟ್ಟು ಕೊಡಿ ಅಂತಾ ಸ್ವತಃ ಸಚಿವ ಆಂಜನೇಯ ಅವರೇ ಹೇಳಿದ್ದರೂ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿಲ್ಲ. ಅಲ್ಲದೇ ಮಾತುಕತೆಗೆ ಬರಲೂ ಸಹ ಸೌಭಾಗ್ಯ ಬಸವರಾಜನ್ ಹಿಂದೇಟು ಹಾಕುತ್ತಿದ್ದಾರೆ.

ಸೌಭಾಗ್ಯ ಬಸವರಾಜನ್ ರಾಜೀನಾಮೆಗಾಗಿ ಇದೇ ತಿಂಗಳ 27 ಕ್ಕೆ ಅಂತಿಮ ಗಡುವು ನೀಡಲಾಗಿದೆ. ಸೌಭಾಗ್ಯ ಅವರು ರಾಜೀನಾಮೆ ನೀಡದಿದ್ದರೆ ಹೈಕಮಾಂಡ್ ಅಥವಾ ಮುಖ್ಯಮಂತ್ರಿಗೆ ದೂರು ನೀಡಲು ಚಿತ್ರದುರ್ಗದ ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ.

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ